ಶುಕ್ರವಾರ, ಡಿಸೆಂಬರ್ 9, 2022
21 °C
ತಿಮ್ಮಾಪುರ ಪೇಟೆಯಲ್ಲಿ ನಾರಾಯಣ ಗುರು ಸಾನಿಧ್ಯದಲ್ಲಿ ಆಯೋಜನೆ

ಲೋಕ ಕಲ್ಯಾಣಕ್ಕಾಗಿ ಪ್ರತ್ಯಂಗಿರಾ ಹೋಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ತಿಮ್ಮಾಪುರಪೇಟೆಯ ಬಾಲಮಾರೆಮ್ಮ ದೇವಸ್ಥಾನದ ಬಳಿ ಪ್ರತ್ಯಂಗಿರಾ ಹೋಮ ಕಾರ್ಯಕ್ರಮ ಸೋಮವಾರ ಅದ್ಧೂರಿಯಾಗಿ ನಡೆಯಿತು.

ಶಾರದಾಂಬೆ ಜ್ಯೋತಿಷ್ಯಾಲಯದ ಕೆ.ನಾರಾಯಣ ಗುರುಗಳ ಸಾನಿಧ್ಯದಲ್ಲಿ ಹೋಮ ಕಾರ್ಯ ನೆರವೇರಿತು. ಲೋಕ ಕಲ್ಯಾಣ ಉದ್ದೇಶದಿಂದ ಆಯೋಜಿಸಿದ್ದ ಹೋಮ ಕಾರ್ಯದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. 

ಮಹಿಳೆಯರು ಗುಲಾಬಿ ವರ್ಣದ ಸೀರೆ ಧರಿಸಿದ್ದರು ಹಾಗೂ ಪುರುಷರು ಕೇಸರಿ ವರ್ಣದ ಶಲ್ಯ, ಪಂಚೆಯೊಂದಿಗೆ ಹೋಮಕಾರ್ಯದಲ್ಲಿ ಭಾಗವಹಿಸಿದ್ದರು. 

ಉಗ್ರನರಸಿಂಹ ಅವತಾರ ಶಾಂತಗೊಳಿಸಲು ತ್ರಿಶಕ್ತಿ ರೂಪವಾಗಿ ಅವತರಿಸಿದ ಪ್ರತ್ಯಂಗಿರಾ ದೇವಿಯ ಹೋಮ ಮಾಡಿದವರಿಗೆ ಜಯ ನಿಶ್ಚಿತ ಎನ್ನುವ ನಂಬಿಕೆ ಇದೆ. ಬೃಹತ್ತಾಗಿ ನಿರ್ಮಾಣ ಮಾಡಿದ್ದ ಹೋಮದ ಅಗ್ನಿಕುಂಡಾ ನಿರ್ವಹಣೆಗಾಗಿ ಬಹಳಷ್ಟು ಸಂಖ್ಯೆಯಲ್ಲಿ ಶಿಷ್ಯರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು