ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಾಜ್ಞೆ ಜಾರಿ ನಾಳೆಯಿಂದ

Last Updated 4 ಅಕ್ಟೋಬರ್ 2020, 3:41 IST
ಅಕ್ಷರ ಗಾತ್ರ

ರಾಯಚೂರು: ಡಿಇಡಿ ಹಾಗೂ ಡಿಪಿಇಡಿ ಪ್ರಥಮ ಹಾಗೂ ದ್ವಿತೀಯ ವಾರ್ಷಿಕ ಪರೀಕ್ಷೆಗಳು ಯರಮರಸ್‍ನ ಡಯಟ್ ಹಾಗೂ ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆಯ ಡಿಇಡಿ ಪರೀಕ್ಷಾ ಕೇಂದ್ರಗಳಲ್ಲಿ ಅಕ್ಟೋಬರ್ 5ರಿಂದ 15ರ ವರೆಗೆ ನಡೆಯಲಿವೆ. ಈ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಕೆಲವು ಷರತ್ತಿಗೊಳಪಟ್ಟು ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್ ಅವರು ಆದೇಶ ಹೊರಡಿದ್ದಾರೆ.

ಅರ್ಜಿ ಆಹ್ವಾನ

ರಾಯಚೂರು: ಅಲ್ಪಸಂಖ್ಯಾತರ ಮೂರಾರ್ಜಿ ದೇಸಾಯಿ ವಸತಿ ಶಾಲೆ, ಬಾಲಕಿಯರ ಪದವಿ ಪೂರ್ವ ಕಾಲೇಜು (ವಿಜ್ಞಾನ ಮತ್ತು ವಾಣಿಜ್ಯ) ಸರ್ಕಾರಿ ಮುಸ್ಲಿಂ ವಸತಿ ಶಾಲೆ, ನವೋದಯ, ಮೌಲಾನ ಆಜಾದ್ ಮಾದರಿ ಶಾಲೆ ಗಳಲ್ಲಿ ಲಭ್ಯವಿರುವ ಒಟ್ಟು 4,360 ಸೀಟುಗಳ ಪೈಕಿ ಇದೂವರೆಗೆ 2,701 ಪ್ರವೇಶಾತಿಗಳು ದಾಖಲಾಗಿವೆ. 1,265 ಬಾಕಿ ಉಳಿದಿದ್ದು, ಅರ್ಜಿ ಸಲ್ಲಿಸುವಂತೆ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT