ಮಾನ್ವಿ: ‘ಕನ್ನಡ ಸಾಹಿತ್ಯ ಪ್ರಕಾರದಲ್ಲಿ ವಿಶಿಷ್ಟವಾಗಿರುವ ಚುಟುಕು ಸಾಹಿತ್ಯ ರಚನೆಗೆ ಪ್ರೋತ್ಸಾಹ ಅಗತ್ಯ" ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಸವಪ್ರಭು ಪಾಟೀಲ ಬೆಟ್ಟದೂರು ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚುಟುಕು ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಕಾರ್ಯಚಟುವಟಿಕೆಗಳ ಉದ್ಘಾಟನೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಾಸ್ಯ, ವಿಡಂಬನೆಯ ಚುಟುಕುಗಳ ರಚನೆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.

ಸಾಹಿತಿ ಆನಂದ ಜೂಕೂರು ವಿಶೇಷ ಉಪನ್ಯಾಸ ನೀಡಿದರು.

ವಿವಿಧ ಕ್ಷೇತ್ರಗಳ ಸಾಧಕರಾದ ನಿವೃತ್ತ ಪಿಎಸ್ಐ ವೀರನಗೌಡ, ನಿವೃತ್ತ ಯೋಧ ಚೆನ್ನಾರೆಡ್ಡಿ, ಕನ್ನಡಪರ ಹೋರಾಟಗಾರ ಸುಭಾನ್ ಬೇಗ್, ಸಮಾಜ ಸೇವಕ ಹನುಮಂತ ಕೋಟೆ, ಎಚ್.ಚಾಂದ್ ಪಾಷಾ ಗುತ್ತೇದಾರ ಮತ್ತಿತರರನ್ನು ಸನ್ಮಾನಿಸಲಾಯಿತು.

ಯುವ ಕವಿಗಳಿಂದ ಚಟುಕು ಕವಿಗೋಷ್ಠಿ ನಡೆಯಿತು.

ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಗರಾವ್ ಸರಕೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತಾಲ್ಲೂಕು ಅಧ್ಯಕ್ಷ ಮಹ್ಮದ್ ಮುಜೀಬ್, ಕಾರ್ಯದರ್ಶಿ ರವಿಶರ್ಮಾ ಜಾನೇಕಲ್, ರಾಜಾ ಮಹೇಂದ್ರ ನಾಯಕ, ಸುರೇಶ ಕುರ್ಡಿ, ಸಂಗಮೇಶ ಮುಧೋಳ, ಬಾಗಯ್ಯ ನಾಯಕ, ಮಧು ಪಾಂಡೆ, ಬಸವರಾಜ ಬ್ಯಾಗವಾಟ, ನಜೀರುದ್ದೀನ್ ಖಾದ್ರಿ, ಮಹಾದೇವಪ್ಪ, ಮೂಕಪ್ಪ ಕಟ್ಟಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.