ಶನಿವಾರ, ಜುಲೈ 2, 2022
25 °C

ಮಾನ್ವಿ: ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಅಗ್ರಹಿಸಿ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಶುಕ್ರವಾರ ಪಟ್ಟಣದ ಬಸವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಳ ಕುರಿತು ನ್ಯಾಯಮೂರ್ತಿ ಎಚ್.ಎಸ್.ನಾಗಮೋಹನದಾಸ್ ಆಯೋಗ ವರದಿ ಸಲ್ಲಿಸಿ ಒಂಬತ್ತು ತಿಂಗಳಾಗಿದ್ದರೂ ಶಿಫಾರಸ್ಸುಗಳನ್ನು ಜಾರಿ ಮಾಡದೆ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಧರಣಿ ನಿರತರು ತೀವ್ರವಾಗಿ ಖಂಡಿಸಿದರು.

ತಹಶೀಲ್ದಾರ್ ಚಂದ್ರಕಾಂತ ಅವರಿಗೆ ಮನವಿ ಸಲ್ಲಿಸಲಾಯಿತು.

ಮಾಜಿ ಶಾಸಕ ಗಂಗಾಧರನಾಯಕ, ಮುಖಂಡರಾದ ರಾಜಾ ವಸಂತನಾಯಕ, ಎ.ಬಾಲಸ್ವಾಮಿ ಕೊಡ್ಲಿ, ರಾಜಾ ರಾಮಚಂದ್ರನಾಯಕ, ಪಿ.ತಿಪ್ಪಣ್ಣ ಬಾಗಲವಾಡ, ಬುಡ್ಡಪ್ಪ ನಾಯಕ ಮಲ್ಲಿನಮಡುಗು, ನರಸಿಂಹನಾಯಕ ಕರಡಿಗುಡ್ಡ, ಪ್ರಭುರಾಜ ಕೊಡ್ಲಿ, ಮ್ಯಾಕಲ್ ಅಯ್ಯಪ್ಪ ನಾಯಕ, ಯಲ್ಲಪ್ಪ ಹಿರೇಬಾದರದಿನ್ನಿ, ಬಸವರಾಜ ನಕ್ಕುಂದಿ, ಗೋವಿಂದರಾಜ ನಾಯ್ಕ, ಶಿವರಾಜ ಜಾನೇಕಲ್, ಎಂ.ಬಿ.ನಾಯಕ ಉದ್ಬಾಳ, ಯಂಕಪ್ಪ ಕಾರಬಾರಿ, ಶರಣಪ್ಪ ಮೇದಾ, ಶಿವರಾಜ ಉಮಳಿಹೊಸೂರು, ಶರಣಬಸವ ನಾಯಕ ಜಾನೇಕಲ್, ಹನುಮೇಶ ನಾಯಕ ಜೀನೂರು, ಕುಮಾರಸ್ವಾಮಿ ಮೇದಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು