ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯಕ್ಕಾಗಿ ತಂಬಿಗೆ ಹಿಡಿದು ಪ್ರತಿಭಟನೆ

Last Updated 8 ಜುಲೈ 2021, 12:32 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ತುರ್ವಿಹಾಳ: ಪಟ್ಟಣದ ವಾರ್ಡ್-1ರಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಸಾರ್ವಜನಿಕ ಮಹಿಳಾ ಶೌಚಾಲಯದ (ಸೆಪ್ಟಿ ಟ್ಯಾಂಕ್) ತೊಟ್ಟಿ ತುಂಬಿ ತಿಂಗಳಾಗಿದೆ. ಶೌಚಾಲಯ ಬಳಕೆಗೆ ಅವಕಾಶ ನೀಡಬೇಕಾದವರೇ ಅದನ್ನು ಬಳಸದಂತೆ ಬೀಗ ಹಾಕಿರುವುದು ಸರಿಯಲ್ಲ ಎಂದು ನೂರಾರು ಮಹಿಳೆಯರು ತಂಬಿಗೆ ಹಿಡಿದು ಪಟ್ಟಣ ಪಂಚಾಯಿತಿ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮುತ್ತಮ್ಮ ಗುಂಜಳ್ಳಿ ಮಾತನಾಡಿ, ‘ಹೊಸ ಶೌಚಾಲಯ ಬಳಕೆಗೆ ಅವಕಾಶ ನೀಡಿ, ಎರಡು ತಿಂಗಳಲ್ಲಿ ಉಪಯೋಗಿಸದಂತೆ ಬೀಗ ಹಾಕಿದ್ದಾರೆ. ಇದರಿಂದ ಅನಿವಾರ್ಯವಾಗಿ ಹಾಳು ಬಿದ್ದಿರುವ ಶೌಚಾಲಯದಲ್ಲಿ ಸರತಿ ನಿಲ್ಲಬೇಕು. ಇಲ್ಲವೇ ಬಯಲಲ್ಲೇ ಬಹಿರ್ದೆಸೆಗೆ ಹೋಗುವ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವಕ ಸಂಘದ ಅಧ್ಯಕ್ಷ ಮಲ್ಲು ಭಂಗಿ ಮಾತನಾಡಿ, ’₹ 8.18 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮಹಿಳೆಯರ ಸಾರ್ವಜನಿಕ ಶೌಚಾಲಯ ಸಂಪೂರ್ಣ ಕಳಪೆ ಮತ್ತು ಅವೈಜ್ಞಾನಿಕತೆಯಿಂದ ಕೂಡಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ‘ ಎಂದು ದೂರಿದರು.

‘ಪ.ಪಂ ಅಧಿಕಾರಿಗಳು ಕೂಡಲೇ ಸಮಸ್ಯೆಗೆ ಸ್ಪಂದಿಸಿ ತುಂಬಿರುವ ಶೌಚಾಲಯದ ತೊಟ್ಟಿಯನ್ನು ಖಾಲಿ ಮಾಡಿಸಿ ಶೌಚಾಲಯ ಬಳಕೆಗೆ ಅವಕಾಶ ಒದಗಿಸಬೇಕು. ವೈಜ್ಞಾನಿಕವಾಗಿ ತೊಟ್ಟಿಯನ್ನು ಮರುನಿರ್ಮಾಣ ಮಾಡಬೇಕು. ಕಳಪೆ ಕಾಮಗಾರಿ ನಿರ್ಮಿಸಿದ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು‘ ಎಂದು ಮಹಿಳೆಯರು ಒತ್ತಾಯಿಸಿದರು.

ಕರಿಯಮ್ಮ ಮಳ್ಳಿ, ದೇವಮ್ಮ ಕಂಬಾರ, ಜಯಶ್ರೀ ಬೇರ್ಗಿ, ಕಾಮಮ್ಮ ಗುಡಿಹಾಳ, ಪಾರ್ವತೆಮ್ಮ ಬೇರ್ಗಿ, ಗಂಗಮ್ಮ ಗುಂತ, ಗ್ರಾಮಸ್ಥರಾದ ಪಕೀರಪ್ಪ ಭಂಗಿ, ಶ್ಯಾಮೀದ್ ಅಲಿ ಅರಬ್, ಯಮನೂರ ಗುಂತ, ಶರಣಪ್ಪ ಗುಂಜಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT