ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಈದ್ ಉಲ್ ಅದಾ ಆಚರಣೆ

Published 17 ಜೂನ್ 2024, 4:14 IST
Last Updated 17 ಜೂನ್ 2024, 4:14 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ವಿವಿಧೆಡೆ ಸೋಮವಾರ ಮುಸ್ಲಿಮರು ಈದ್ ಉಲ್ ಅದಾ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮಕ್ಕಳು ಆದಿಯಾಗಿ ಹೊಸ ಬಟ್ಟೆ ಧರಿಸಿ 'ಲಬ್ಬೈಕ್ ಅಲ್ಲುಹುಮ್ಮ,ಲಬ್ಬೈಕ್ ' ಎನ್ನುವ ಮಂತ್ರ ಪಠಿಸುತ್ತ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಪರಸ್ಪರ ಆಲಿಂಗನ ಮಾಡಿ ಈದ್ ಮುಬಾರಕ್ ಎನ್ನುತ್ತ ಶುಭಾಶಯ ವಿನಿಮಯ ಮಾಡಿಕೊಂಡರು.

ಭಾನುವಾರ ಮಧ್ಯಾಹ್ನ, ರಾತ್ರಿ ಕೆಲಕಾಲ ಮಳೆ ಸುರಿದ ಕಾರಣ ರಾಯಚೂರಿನ ಅರಬ್ ಮೊಹಲ್ಲಾ ಬಳಿಯ ಈದ್ಗಾ ಮೈದಾನ ಹಾಗೂ ರಸ್ತೆ ಬದಿಯಲ್ಲಿ ನೀರು ನಿಂತಿತ್ತು, ನೀರಿನ ಪಕ್ಕದಲ್ಲಿಯೇ ಜಮಖಾನಾ ಹಾಸಿ ನಮಾಜ್ ಮಾಡಿ ಭಕ್ತಿಭಾವ ಮೆರೆದರು.

ಪ್ರಾರ್ಥನೆಯ ನಂತರ ಕೆಲವರು ಹಿರಿಯರ ಸಮಾಧಿ ಇರುವ ಸ್ಥಳಕ್ಕೆ ತೆರಳಿ ಪುಷ್ಪ ಸಮರ್ಪಣೆ ಮಾಡಿ ಅವರನ್ನು ಸ್ಮರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT