ಮಂಗಳವಾರ, ಜೂನ್ 15, 2021
23 °C

ರಾಯಚೂರು: ಮತದಾನಕ್ಕಾಗಿ‌ ಬಂದಿದ್ದ ಐದು ಕಾರ್ಮಿಕರು ಮಸಣಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಮಾಡಿ ದೇವದುರ್ಗದಿಂದ ಬೆಂಗಳೂರಿಗೆ ಮರಳುತ್ತಿದ್ದ ಕಾರ್ಮಿಕರಿದ್ದ ಕ್ರೂಸರ್ ವಾಹನ ಹಾಗೂ ಸರ್ಕಾರಿ ಬಸ್ ನಡುವೆ ಡಿಕ್ಕಿಯಾಗಿ ಐದು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಏಳು ಜನರು ಗಾಯಗೊಂಡ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಬಿ.ಜಿ.ಕೆರೆ‌‌ ಗ್ರಾಮದ ಬಳಿ ಶನಿವಾರ ರಾತ್ರಿ ನಡೆದಿದೆ.

ದೇವದುರ್ಗ ತಾಲ್ಲೂಕಿನ ಎಚ್.ಸಿದ್ದಾಪುರ ಗ್ರಾಮದ ತಿಮ್ಮಣ್ಣ(40), ರತ್ನಮ್ಮ(35), ಸೋಮನಮರಡಿ ಗ್ರಾಮದ ನಿವಾಸಿ ಮಹೇಶ(19), ಗಣಜಲಿ ಗ್ರಾಮದ ನಿವಾಸಿ ದುರಗಪ್ಪ (16) ಮೃತಪಟ್ಟವರು. ಗಾಯಗೊಂಡವರನ್ನು ಚಿತ್ರದುರ್ಗದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.

ಡಿಸೆಂಬರ್ 22 ರಂದು ಮತದಾನ ಮಾಡಲು ಗ್ರಾಮಕ್ಕೆ ಬಂದಿದ್ದ ಅವರು ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಅಪಘಾತ ನಡೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು