ರಾಯಚೂರು: ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯಲ್ಲಿ ಗೋಲ್ಡ್ಲೋನ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿ ಬ್ಯಾಂಕ್ ಮ್ಯಾನೇಜರ್ ಪರಾರಿಯಾಗಿದ್ದಾರೆ.

ರಾಯಚೂರಿನ ಗಾಂಧಿ ಚೌಕ್ ಸಮೀಪದ ಬ್ಯಾಂಕ್ ಆಫ್ ಮಹಾರಾಷ್ಟ್ರದ ಮ್ಯಾನೇಜರ್ ನರೇಂದ್ರ ರೆಡ್ಡಿ ವಿರುದ್ಧ ಸೈಬರ್ ಠಾಣೆಯಲ್ಲಿ ಹುಬ್ಬಳ್ಳಿಯ ವಿದ್ಯಾನಗರದ ಬ್ಯಾಕ್ ಆಫ್ ಮಹಾರಾಷ್ಟ್ರದ ವಲಯ ಕಚೇರಿ ಅಧಿಕಾರಿ ಸುಜೇತ್ ಡಿಸೋಜಾ ದೂರು ನೀಡಿದ್ದಾರೆ.

ನರೇಂದ್ರ ರೆಡ್ಡಿ 2022ರ ಅಕ್ಟೋಬರ್ 14ರಿಂದ 2025ರ ಮಾರ್ಚ್ 7ರ ವರೆಗೂ ಯಾವುದೇ ದಾಖಲೆ ಇಲ್ಲದೇ ಗ್ರಾಹಕರ ಹೆಸರಲ್ಲಿ ಚಿನ್ನದ ಸಾಲ ಹಾಗೂ ಠೇವಣಿ ರಸೀದಿ ಹೆಸರಲ್ಲಿ ಅಕ್ರಮವಾಗಿ ₹ 10.97 ಕೋಟಿ ಸಾಲವನ್ನು ಸ್ವಂತಕ್ಕೆ ಬಳಸಿಕೊಂಡಿರುವುದು ಆಂತರಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಿದ್ದಾರೆ.

ಗ್ರಾಹಕರು ಬ್ಯಾಂಕಿನಲ್ಲಿ ಇಟ್ಟಿದ್ದ ಚಿನ್ನದ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಕ್ರಮವಾಗಿ ಹಣವನ್ನೂ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಬ್ಯಾಂಕ್ನಲ್ಲಿ ಅಧಿಕಾರ ವಹಿಸಿಕೊಂಡ ಮೂರು ವರ್ಷಗಳಲ್ಲಿ 105 ನಕಲಿ ಖಾತೆ ತೆರೆದೊದ್ದಾರೆ. ಬಳಿಕ ಗ್ರಾಹಕರಿಗೆ ಗೊತ್ತಿಲ್ಲದೇ ಅವರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಮೋಸ ಮಾಡಿದ್ದಾರೆ. ನಕಲಿ ಖಾತೆಗಳಿಂದ ಹಣವನ್ನು ಸಂಬಂಧಿಕರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ತನಿಖೆ ಮುಂದುವರಿದಿದ್ದು, ವಂಚನೆ ಮಾಡಿರುವ ಮೊತ್ತ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಬ್ಯಾಂಕ್ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
.ರಾಯಚೂರು: ಸಾವಿನಲ್ಲೂ ಒಂದಾದ ಕಪಗಲ್ ದಂಪತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.