ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ರಸ್ತೆ ವಿಸ್ತರಣೆ ಕಾಮಗಾರಿ ಆರಂಭ

Published 25 ಆಗಸ್ಟ್ 2023, 14:22 IST
Last Updated 25 ಆಗಸ್ಟ್ 2023, 14:22 IST
ಅಕ್ಷರ ಗಾತ್ರ

ಮಸ್ಕಿ: ಪಟ್ಟಣದ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ ಎರಡು ಕಿ.ಮೀ ರಸ್ತೆ ವಿಸ್ತರಣೆ, ವಿಭಜಕ ನಿರ್ಮಾಣ ಹಾಗೂ ಬೀದಿದೀಪ, ಚರಂಡಿ ಕಾಮಗಾರಿ ಆರಂಭವಾಗಿದೆ.

ಶುಕ್ರವಾರ ರಸ್ತೆ ವಿಸ್ತರಣೆಗೆ ಎರಡು ಕಡೆ ಗುರುತು ಮಾಡುವ ಕಾರ್ಯ ಆರಂಭವಾಗಿದೆ. ರಸ್ತೆ ಮದ್ಯಭಾಗದಿಂದ ಎರಡು ಕಡೆ ತಲಾ 50 ಅಡಿಗೆ ಗುರುತು ಮಾಡಲಾಗಿದೆ. ಅದರೊಳಗೆ ಬರುವ ಅಂಗಡಿ ತೆರವು ಮಾಡಿಸುವಂತೆ ಗುತ್ತಿಗೆದಾರ ಶ್ರೀನಿವಾಸ್ ಅಮ್ಮಾಪುರ ಕಂಪನಿಯವರು ಪುರಸಭೆಗೆ ಪತ್ರ ಬರೆದಿದ್ದಾರೆ.

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಂದಾಜು ₹8 ಕೋಟಿ ವೆಚ್ಚದಲ್ಲಿ ಪಟ್ಟಣದ ರಸ್ತೆ ಅಭಿವೃದ್ಧಿ ಮಾಡಲಾಗುತ್ತದೆ. ಶೀಘ್ರದಲ್ಲಿಯೇ ರಸ್ತೆಯ ಎರಡು ಬದಿಯ ಅಂಗಡಿಗಳನ್ನು ತೆರವು ಮಾಡಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ‘ಪ್ರಜಾವಾಣಿ’ ಗೆ ತಿಳಿಸಿದರು.

ಕಳೆದ ಎರಡು ದಿನಗಳಿಂದ ಅಮ್ಮಾಪುರ ಕಂಪನಿಯ ಹತ್ತಕ್ಕೂ ಹೆಚ್ಚು ಸಿಬ್ಬಂದಿ ರಸ್ತೆ ಸರ್ವೆ ಕೈಗೊಂಡಿದ್ದಾರೆ. ಎರಡು ಕಡೆ ಹಳದಿ ಗುರುತು ಹಾಕಿ ಅಂಗಡಿಗಳವರಿಗೆ ಸೂಚನೆ ನೀಡುತ್ತಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT