ಮುದಗಲ್: ‘ಮುದಗಲ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ 2024-25ನೇ ಸಾಲಿನಲ್ಲಿ ₹1.80 ಕೋಟಿ ಲಾಭ ಗಳಿಸಿದೆ’ ಎಂದು ಬ್ಯಾಂಕ್ನ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ತಿಳಿಸಿದರು.

ಪಟ್ಟಣದ ಕಿಲ್ಲಾ ರಾಮಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಬ್ಯಾಂಕ್ನ 29ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

‘ಬ್ಯಾಂಕ್ನಲ್ಲಿ ₹134 ಕೋಟಿ ದುಡಿಮೆ ಬಂಡವಾಳ ಇದೆ. ಬ್ಯಾಂಕ್ ಬಗ್ಗೆ ಸದಸ್ಯರಿಗೆ ಕಾಳಜಿ ಕಡಿಮೆ ಇದೆ. ನಮ್ಮ ಬ್ಯಾಂಕ್ನಲ್ಲಿ ಠೇವಣಿ ಇಡಲು ಮುಂದೆ ಬರುತ್ತಿಲ್ಲ. ಮುದಗಲ್ ಖುಷ್ಕಿ ಬೇಸಾಯದ ಪ್ರದೇಶವಾದ ಕಾರಣ ಬ್ಯಾಂಕ್ ತೀವ್ರ ಗತಿಯಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಸದಸ್ಯರು ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಠೇವಣಿ ಇಡುವುದಕ್ಕಿಂತ ನಮ್ಮ ಬ್ಯಾಂಕ್ನಲ್ಲಿ ಠೇವಣಿ ಇಟ್ಟು ಬ್ಯಾಂಕ್ ಅಭಿವೃದ್ಧಿ ಪಡಿಸಬೇಕು’ ಎಂದರು.

ಬ್ಯಾಂಕ್ ಸಿಇಒ ಶಾಂತಾ ಕರಡಕಲ್, ನಿರ್ದೇಶಕ ಗುರುರಾಜ ದೇಶಪಾಂಡೆ ಮಾತನಾಡಿದರು.

ಉಪಾಧ್ಯಕ್ಷ ಹನಮಂತಪ್ಪ ಕಂದಗಲ್, ಟಿ.ಶೇಷಣ್ಣ, ಸುರೇಶಕುಮಾರ ಜೈನ್, ಶರಣಗೌಡ ಪಾಟೀಲ ವ್ಯಾಸ ನಂದಿಹಾಳ, ರಾಜಕುಮಾರ ಮಾಲಿ ಪಾಟೀಲ, ವೆಂಕಟೇಶ ಕುಲಕರ್ಣಿ, ಶಶಿಧರ ಪಾಟೀಲ, ಮಹಾಂತೇಶ ನರಕಲದಿನ್ನಿ, ದೊಡ್ಡಪ್ಪ ಸಾಹುಕಾರ, ಸೋಮಶೇಖರ ಐದನಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.