ಮುದಗಲ್: ಸಮೀಪದ ಆನೆಹೊಸೂರು, ಚಿತ್ತಾಪುರ, ರೋಡಲಬಂಡಾ ಸೇರಿದಂತೆ ಇನ್ನಿತರ ಗ್ರಾಮೀಣ ಪ್ರದೇಶದಲ್ಲಿ ವರ್ಷದಿಂದ ನಿರಂತರ ಕಳವು ಪ್ರಕರಣಗಳು ಜನರಲ್ಲಿ ಆತಂಕ ಹೆಚ್ಚಿಸಿವೆ.

ಜನರಿಗೆ ಯಾವಾಗ, ಎಲ್ಲಿ, ಏನು ಕಳ್ಳತನವಾಗುತ್ತದೆ ಎಂಬ ಭಯ ಆವರಿಸಿದೆ. ಆನೆಹೊಸೂರು ಗ್ರಾಮದಲ್ಲಿ ಅಮರೇಶ ಗುಂಜಾಲಿ ಅವರ ಹೋಂಡಾ ಯೂನಿಕಾರ್ನ್ ಬೈಕ್, ಗೊಬ್ಬರ ಅಂಗಡಿ ಸ್ವಾಮಿ ಅವರ ಬೈಕ್, ಶರಣಪ್ಪ ಅವರ ಹೋಂಡಾ ಶೈನ್ ಬೈಕ್, ಮಿಯಾಖಾನ್ ಅವರ ಬೈಕ್ ಸೇರಿದಂತೆ 10ಕ್ಕೂ ಹೆಚ್ಚು ಬೈಕ್ಗಳು ಹಾಗೂ ಇನ್ನಿತರ ವಸ್ತುಗಳು ಕಳುವಾಗಿವೆ. ಈವರೆಗೂ ಪೊಲೀಸರಿಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಚಿತ್ತಾಪುರ ಗ್ರಾಮದಲ್ಲಿ ಆಂಧ್ರ ಮೂಲದ ವ್ಯಕ್ತಿಯ ಹೋಟೆಲ್ನಲ್ಲಿದ್ದ ₹20 ಸಾವಿರ, ಸೋಹಲ್ ಕಿರಾಣಿ ಅಂಗಡಿಯಲ್ಲಿದ್ದ ₹1.5 ಲಕ್ಷ ನಗದು ಕಳವಾಗಿವೆ. ಇದೇ ಗ್ರಾಮದಲ್ಲಿ ಇನ್ನೊಂದು ಕಿರಾಣಿ ಅಂಗಡಿ ಕಳ್ಳತನ ನಡೆದಿದೆ. ರೋಡಲಬಂಡಾ ಗ್ರಾಮದಲ್ಲಿ 2 ಬೈಕ್ ಕಳವಾಗಿವೆ. ಚಿತ್ತಾಪುರ ಗ್ರಾಮದ ಕಳ್ಳತನ ನಡೆದ ಘಟನೆ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದರೂ ಕಳ್ಳರ ಪತ್ತೆಯಾಗಿಲ್ಲ. ನಿರಂತರ ಕಳವಿನ ಪ್ರಕರಣಗಳಿಂದಾಗಿ ಜನರಲ್ಲಿ ಹೆದರಿಕೆ ಶುರುವಾಗಿದೆ. ಇದರೊಂದಿಗೆ ಅಪರಾಧ ಕೃತ್ಯಗಳು ಹೆಚ್ಚಿದ್ದು, ಜನರಲ್ಲಿನ ಭೀತಿಯನ್ನು ಹೆಚ್ಚಿಸಿದೆ.

ಕಳವು ಪ್ರಕರಣಗಳ ಕುರಿತು ದೂರುಗಳು ದಾಖಲಾಗಿವೆ. ಆದರೆ ಈವರೆಗೂ ಒಬ್ಬ ಆರೋಪಿಯ ಪತ್ತೆಯೂ ಆಗಿಲ್ಲ. ಪೊಲೀಸರು ಗ್ರಾಮೀಣ ಭಾಗದಲ್ಲಿ ಕಳ್ಳತನ ಪ್ರಕರಣಗಳ ಕುರಿತು ಜನರಲ್ಲಿ ಜಾಗೃತಿಯನ್ನೂ ಮೂಡಿಸುತ್ತಿಲ್ಲ. ಇನ್ನಾದರೂ ಪೊಲೀಸರು ಆರೋಪಿಗಳ ಪತ್ತೆ ಕಾರ್ಯವನ್ನು ಚುರುಕುಗೊಳಿಸಬೇಕು. ನಗದು, ಬೈಕ್, ಚಿನ್ನಾಭರಣ ಕಳೆದುಕೊಂಡವರಿಗೆ ನ್ಯಾಯ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

‘ಕೃಷಿ ಕೆಲಸ ಮುಗಿಸಿಕೊಂಡು ತಡರಾತ್ರಿ ಮನೆಗೆ ತೆರಳುವವರನ್ನೂ ಜನ ಕಳ್ಳರೆಂದು ಅನುಮಾನಿಸುವಂತಾಗಿದೆ. ಅಷ್ಟೊಂದು ಭಯ ಆವರಿಸಿದೆ. ನಂಬರ್ ಪ್ಲೇಟ್ ಇಲ್ಲದ ಬೈಕ್, ಸಂಶಯಾಸ್ಪದ ಚಲನವಲ ತೋರುವ ಬೈಕ್–ವಾಹನ ಸವಾರರನ್ನು ಹಿಡಿದು, ವಿಚಾರಣೆಗೆ ಒಳಪಡಿಸಬೇಕು. ಅವರ ಇರುವಿಕೆ ಹಾಗೂ ಚಲನವಲಗಳ ಬಗ್ಗೆ ಖಚಿತಪಡಿಸಿಕೊಳ್ಳಲು, ಹಗಲು ಗಸ್ತು ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಗ್ರಾಮಸ್ಥ ಶರಣಪ್ಪ ಆರೋಪಿಸಿದರು.

ಲಿಂಗಸುಗೂರು ತಾಲ್ಲೂಕಿನ ಆನೆಹೊಸೂರು ಗ್ರಾಮದಲ್ಲಿ ನಡೆಯುತ್ತಿರುವ ನಿರಂತರ ಬೈಕ್ ಕಳ್ಳರನ್ನು ಶೀಘ್ರವೇ ಪತ್ತೆ ಮಾಡಲು ಸೂಚಿಸುತ್ತೇನೆ.
– ಪುಟ್ಟಮಾದಯ್ಯ, ಎಸ್.ಪಿ. ರಾಯಚೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.