ಶನಿವಾರ, ಜೂನ್ 19, 2021
28 °C

ರಾಯಚೂರು: ವೈಟಿಪಿಎಸ್‌ನಲ್ಲಿ ಬೆಂಕಿಗೆ ಕಲ್ಲಿದ್ದಲು ಸಾಗಣೆ ಬೆಲ್ಟ್‌ ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಯರಮರಸ್‌ ಸೂಪರ್‌ಕ್ರಿಟಿಕಲ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ವೈಟಿಪಿಎಸ್‌) ಕಲ್ಲಿದ್ದಲು ವಿಭಾಗದಲ್ಲಿ ಭಾನುವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದರಿಂದ ಕಲ್ಲಿದ್ದಲು ಸಾಗಿಸುವ ಬೆಲ್ಟ್‌ ಸಂಪೂರ್ಣ ಉರಿದುಹೋಗಿದೆ.

ದಾಸ್ತಾನು ಮಾಡಿದ ಕಲ್ಲಿದ್ದಲು ರಾಶಿಯೊಳಗೆ ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಬೆಂಕಿ ಕಾಣಿಸಿಕೊಳ್ಳುವುದು ಸಾಮಾನ್ಯ. ಬೆಂಕಿ ದಟ್ಟವಾದರೆ ಮಾತ್ರ ಬೆಲ್ಟ್‌ಗೆ ಕಲ್ಲಿದ್ದಲು ಸಾಗಿಸುವ ಪೂರ್ವದಲ್ಲಿ ಬೆಂಕಿ ನಂದಿಸುತ್ತಾರೆ. ಇದೀಗ ಬೆಂಕಿ ನಂದಿಸದೆ ಇರುವುದು ಈ ಅವಘಡಕ್ಕೆ ಕಾರಣವಾಗಿದೆ.

ಬೆಲ್ಟ್‌ ಸಂಪೂರ್ಣ ಸುಟ್ಟಿದ್ದು, ಕೆಲವು ಯಂತ್ರಗಳಿಗೂ ಹಾನಿಯಾಗಿದೆ. ಪರ್ಯಾಯ ಬೆಲ್ಟ್‌ ಮಾರ್ಗದಿಂದ ಕಲ್ಲಿದ್ದಲು ಸಾಗಣೆ ಆರಂಭವಾಗಿದೆ. ‘ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳಲ್ಲಿ ಬೆಂಕಿ ಅವಘಡಗಳು ಸಾಮಾನ್ಯವಾಗಿ ನಡೆಯುತ್ತವೆ. ಮುಂಜಾಗ್ರತೆ ಬಿಗಿ ಮಾಡಬೇಕು’ ಎಂದು ವೈಟಿಪಿಎಸ್‌ ಅಧಿಕಾರಿಯೊಬ್ಬರು ತಿಳಿಸಿದರು;

ವೈಟಿಪಿಎಸ್‌ ಪೂರ್ಣಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಆರಂಭಿಸಿದೆ. ಎರಡು ಘಟಕಗಳಿಂದ ಒಟ್ಟು ₹1,600 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು