ಭಾನುವಾರ, ಸೆಪ್ಟೆಂಬರ್ 19, 2021
23 °C
ಮಿನಿವಿಧಾನಸೌಧ ಎದುರು ಪ್ರಗತಿಪರ ಒಕ್ಕೂಟದ ಪ್ರತಿಭಟನೆ

ಅತ್ಯಾಚಾರ ಪ್ರಕರಣ: ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ದೆಹಲಿಯಲ್ಲಿ ಈಚೆಗೆ ನಡೆದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ, ಸಂಬಂಧಿಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಗುರುವಾರ ಪ್ರತಿಭಟನೆ ನಡೆಸಿತು.

ಕಳೆದ ಆರೇಳು ವರ್ಷಗಳಿಂದ ಪರಿಶಿಷ್ಟ ಜಾತಿ ಸಮುದಾಯದ ಮಹಿಳೆಯರು, ಮಕ್ಕಳು ಹಾಗೂ ಯುವತಿಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಹಾಗೂ ಕೊಲೆ ಘಟನೆಗಳು ಹೆಚ್ಚುತ್ತಿದ್ದು, ಸಮುದಾಯದ ಜನರಲ್ಲಿ ಅಭದ್ರತೆ ಕಾಡುತ್ತಿದೆ. ಇದಕ್ಕೆ ಕಾರಣರಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆರ್‌ವೈಎಫ್ ಸಂಚಾಲಕ ನಾಗರಾಜ್ ಪೂಜಾರ್ ಒತ್ತಾಯಿಸಿದರು.

ನಂತರ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ ಹಾಗೂ ಸಮುದಾಯ ಸಂಘಟನೆಯ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿದರು.

ಉಪನ್ಯಾಸಕ ಶಂಕರ್ ವಾಲಿಕಾರ್ ಅವರು, ಶಿರಸ್ತೇದಾರ್ ಅಂಬಾದಾಸ್ ಅವರಿಗೆ ಮನವಿ ಸಲ್ಲಿಸಿದರು.

 ಮುಖಂಡರಾದ ಡಿ.ಎಚ್.ಕಂಬಳಿ, ಶೇಕ್ಷಾಖಾದ್ರಿ, ಬಿ.ಲಿಂಗಪ್ಪ, ಎಸ್.ದೇವೇಂದ್ರಗೌಡ, ಖಾದರ್ ಸುಭಾನಿ, ವೆಂಕೋಬ ನಾಯಕ, ಬಸವರಾಜ ಬಾದರ್ಲಿ, ನಾರಾಯಣ ಬೆಳಗುರ್ಕಿ, ಸಮ್ಮದ್ ಚೌದ್ರಿ, ಚಿಟ್ಟಿಬಾಬು, ರಮೇಶ್ ಪಾಟೀಲ್ ಬೇರಿಗಿ, ಅಪ್ಪಣ್ಣ ಕಾಂಬ್ಳೆ, ಆರ್.ಎಚ್.ಕಲಮಂಗಿ, ವಸೀಮ್, ಸೈಯ್ಯದ್ ತನ್ವೀರ್, ನಿರುಪಾದಿ ಸಾಸಲಮರಿ, ಬಸವರಾಜ ಕೊಂಡೆ, ಭೀಮೇಶ ಕವಿತಾಳ, ಮಲ್ಲಿಕಾರ್ಜುನ ಹೂಗಾರ್, ಮಲ್ಲಿಕಾರ್ಜುನ ಕುರುಗೋಡು, ನಾಗರಾಜ್ ತುರ್ವಿಹಾಳ, ತಿಮ್ಮಣ್ಣ ರಾಮತ್ನಾಳ, ನಾಗರಾಜ ಸಾಸಲಮರಿ, ನಾಗರಾಜ ಹೆಡಿಗಿಬಾಳ, ಮಲ್ಲಿಕಾರ್ಜುನ ದೀನಸಮುದ್ರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು