ಲಿಂಗಸುಗೂರು: ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ಜಿಲ್ಲಾಮಟ್ಟದ ಅಧಿಕಾರಿ ಧ್ವಜಾರೋಹಣ ನೆರವೇರಿಸಲು ಹೋದಾಗ ಧ್ವಜದ ದಾರ ಗಂಟುಬಿದ್ದು ಎಡವಟ್ಟು ಸಂಭವಿಸಿದೆ.
‘ಸಿಡಿಪಿಒ ಬರುವ ತನಕ ತಡೆಯದ ಪ್ರೋಗ್ರಾಂ ಅಧಿಕಾರಿ ಅಧಿಕಾರ ದುರುಪಯೋಗ ಮಾಡಿ ಧ್ವಜಾರೋಹಣ ನೆರವೇರಿಸುವಾಗ ಗಂಟು ಬಿದ್ದು ಅಡಚಣೆ ಆಗಿತ್ತು’ ಎಂಬುದು ಪ್ರತ್ಯಕ್ಷದರ್ಶಿಗಳ ಆರೋಪ.
ಈ ಕುರಿತು ಸಿಡಿಪಿಒ ಗೋಕುಲಸಾಬ ಅವರನ್ನು ಸಂಪರ್ಕಿಸಿದಾಗ, ‘ಹಿರಿಯ ಅದಿಕಾರಿ ತಾವು ಬರುವ ಮುಂಚೆಯೇ ಧ್ವಜಾರೋಹಣ ನೆರವೇರಿಸಿದಾಗ ಸಣ್ಣ ಲೋಪವಾಗಿದೆ. ಧ್ವಜಕ್ಕೆ ಅಪಮಾನ ಆಗಿಲ್ಲ’ ಎಂದು ಹೇಳಿಕೊಂಡಿದ್ದಾರೆ.