ಮಾನ್ವಿ: ’ದೇಶ ಕಂಡ ಮಹಾನ್ ನಾಯಕ ಡಾ.ಬಿ. ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾದದ್ದಲ್ಲ. ಭಾರತ ದೇಶದ ಪ್ರತಿಯೊಬ್ಬರ ಆರ್ಥಿಕ, ಸಮಾಜಿಕ, ಸಮಾನತೆಗಾಗಿ ನೀಡಿದ ಪವಿತ್ರ ಗ್ರಂಥವಾಗಿದೆ' ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಹೇಳಿದರು.

ಮಂಗಳವಾರ ತಾಲ್ಲೂಕಿನ ಜಾಗೀರ ಪನ್ನೂರು ಗ್ರಾಮದಲ್ಲಿ ಡಾ ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

’ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳು ನಮಗೆಲ್ಲಾ ಮಾದರಿ. ಅವರ ಕಾರ್ಯಗಳು ಎಲ್ಲಾ ಜಾತಿ, ಧರ್ಮದ ಜನಾಂಗದವರಿಗೆ ಸಮಾನ ಅವಕಾಶ ಕಲ್ಪಿಸಿದೆ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಾಸಕರ ಜಿ.ಹಂಪಯ್ಯ ನಾಯಕ ಮಾತನಾಡಿ,' ಸಂವಿಧಾನದ ಆಶಯಗಳನ್ನು ಎಲ್ಲರೂ ಈಡೇರಿಸಬೇಕು' ಎಂದರು.

ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಹಿರಿಯ ಮುಖಂಡರಾದ ಬಾಲಸ್ವಾಮಿ ಕೊಡ್ಲಿ ವಿಶೇಷ ಉಪನ್ಯಾಸ ನೀಡಿದರು. ಫಾದರ್ ಬರ್ತಲೋಮಿಯ, ಫಾದರ್ ರಾಯಪ್ಪ, ಮಿಕೇಲಪ್ಪ, ಮರಿಯಪ್ಪ, ನರಸಪ್ಪ, ಜಯಣ್ಣ, ಹನುಮೇಶ ಮದ್ಲಾಪುರ, ಅಬ್ದುಲ್ ಗಪೂರ್ ಸಾಬ್, ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ. ಅಬ್ರಹಾಂ ಪನ್ನೂರು, ಸಂಪತ್ ರಾಜ್, ಯಮನಪ್ಪ ಜಾಗೀರಪನ್ನೂರು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.