ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಸ್ಕಿ | ವೈದ್ಯ ವಿದ್ಯಾರ್ಥಿನಿ ಕೋಲೆ ಖಂಡಿಸಿ ಪ್ರತಿಭಟನೆ

Published : 18 ಆಗಸ್ಟ್ 2024, 14:06 IST
Last Updated : 18 ಆಗಸ್ಟ್ 2024, 14:06 IST
ಫಾಲೋ ಮಾಡಿ
Comments

ಮಸ್ಕಿ: ಕೊಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆ ಮಾಡಿದ ಕೃತ್ಯ ಖಂಡಿಸಿ ಪಟ್ಟಣದಲ್ಲಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಡಾ.ಮಲ್ಲಿಕಾರ್ಜುನ ಇತ್ಲಿ, ವೈದ್ಯರ ಮೇಲೆ ನಿರಂತರ ಹಲ್ಲೆ, ಹತ್ಯೆಗಳು ನಡೆಯುತ್ತಿವೆ. ಸರ್ಕಾರ ಕೂಡಲೇ ಇದಕ್ಕೆ ನಿಯಂತ್ರಣ ಹಾಕಬೇಕು ಎಂದು ಆಗ್ರಹಿಸಿದರು. ಉಪ ತಹಶೀಲ್ದಾರ್ ನಾಗಲಿಂಗ ಪತ್ತಾರ ಮನವಿ ಸ್ವೀಕರಿಸಿದರು.

ಡಾ.ತೇಜಸ್ವಿನಿ ಇತ್ಲಿ, ಡಾ.ನಾಗನಗೌಡ, ಡಾ.ರಾಘವೇಂದ್ರ, ಡಾ.ಮಲ್ಲಿಕಾರ್ಜುನ ಶೆಟ್ಟಿ. ಡಾ.ಸಿದ್ದಣ್ಣ ಇತ್ಲಿ, ಡಾ.ವಿನೋದ ಅಂಗಡಿ, ಡಾ.ಆದಪ್ಪ ನಾಯಕ, ಡಾ.ಹಿರೇಮಠ, ಡಾ.ಪ್ರವೀಣಕುಮಾರ, ಡಾ.ದೌವಲಸಾಬ, ಶಿವರಾಜ ಇತ್ಲಿ ಸೇರಿದಂತೆ ಇತರರು ಇದ್ದರು.

ಸಂಜೆ ಕ್ಯಾಂಡಲ್ ಹಚ್ಚಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ ವೈದ್ಯರು ಡಾ.ಅಂಬೇಡ್ಕರ್ ಪ್ರತಿಮೆ ಸ್ಥಳಕ್ಕೆ ಬಂದು ಮಾಲಾರ್ಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT