ಬುಧವಾರ, ಜನವರಿ 26, 2022
25 °C

ರಿಮ್ಸ್ ಆವರಣದ ಮುಂದೆ ವೈದ್ಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೋವಿಡ್ ವೇಳೆ ಕಾರ್ಯನಿರ್ವಹಿಸಿದ ವೈದ್ಯರಿಗೆ, ಸ್ನಾತಕೋತ್ತರ ಪದವಿಧರರಿಗೆ ಹಾಗೂ ಇಂಟರ್ನಿಗಳಿಗೆ ಭತ್ಯೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಅಸೋಷಿಯೇಶನ್ ಆಫ್ ರೆಸಿಡೆಂಡ್‌ ಡಾಕ್ಟರ್ಸ್ ವತಿಯಿಂದ ರಿಮ್ಸ್ ಆಸ್ಪತ್ರೆಯ ಆವರಣದ ಮುಂದೆ ಸೋಮವಾರ ಯುವ ವೈದ್ಯರು ಪ್ರತಿಭಟನೆ ನಡೆಸಿದರು.

ಒಂದು ವರ್ಷದಿಂದ ರಾಜ್ಯದಾದ್ಯಂತ ಆರೋಗ್ಯ ರಕ್ಷಣಾ ಕಾರ್ಯಕರ್ತರು ಕೋವಿಡ್ ವಿರುದ್ಧ ಕೆಲಸ ಮಾಡಿದ್ದಾರೆ. ಇವರ ಕಾರ್ಯವನ್ನು ಗುರುತಿಸಿ ಸರ್ಕಾರ ಕೊರೊನಾ ವಾರಿಯರ್ಸ್ ಎಂದು ವೈಭವೀಕರಿಸಲಾಗಿದೆ. ಎಲ್ಲಾ ವೈದ್ಯರಿಗೆ ಏಪ್ರಿಲ್ ತಿಂಗಳಿನಿಂದ ತಿಂಗಳಿಗೆ ₹10 ಸಾವಿರ ಕೋವಿಡ್ ಭತ್ಯೆ ಘೋಷಿಸಿದೆ. ಆದರೆ 6 ತಿಂಗಳು ಕಳೆದರೂ ವೈದ್ಯರಿಗೆ ಭತ್ಯೆ ನೀಡಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷೆ ಡಾ.ನಮ್ರತಾ, ಡಾ. ತೇಜಸ್, ಡಾ.ರಮೇಶ ಎಸ್ಎಂ, ಡಾ.ವಿಜಯ ಕುಮಾರ, ಡಾ.ನಿಖಿಲ್, ಡಾ.ಸಚಿನ್ ಹಳ್ಳಿ ಮತ್ತಿತರರು ಇದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.