ಶುಕ್ರವಾರ, ಆಗಸ್ಟ್ 12, 2022
27 °C

ರಾಯಚೂರು: ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಾಲಹಳ್ಳಿ: ಇಲ್ಲಿಗೆ ಸಮೀಪ ಚಿಂಚೋಳಿ ಗ್ರಾಮದ ಬಳಿ ತಿಂಥಣಿ ಬ್ರಿಡ್ಜ್‌–ಕಲ್ಮಲಾ ರಾಜ್ಯಹೆದ್ದಾರಿಯಲ್ಲಿ ಕಾರು–ಲಾರಿ ಮಧ್ಯೆ ಶುಕ್ರವಾರ ಡಿಕ್ಕಿ ಉಂಟಾಗಿ ಒಬ್ಬರು ಮಹಿಳೆ ಸೇರಿ ಮೂವರು  ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಲಿಂಗಸುಗೂರು ತಾಲ್ಲೂಕಿನ ದೇವರಭೂಪುರ ಗ್ರಾಮದ ಪದ್ದಮ್ಮ ಹನುಮನಗೌಡ (40), ಅಂಬಣ್ಣಗೌಡ ಆದನಗೌಡ (65) ಹಾಗೂ ರಾಮಣ್ಣಾ ಗುಡದನಾಳ (90) ಮೃತಪಟ್ಟಿದ್ದಾರೆ. ಗುಂಡಪ್ಪ ಯರಡೋಣಿ, ಶಿವನಗೌಡ ಪೊಲೀಸ್‌ಪಾಟೀಲ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಜಾಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. 

ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ಕಾರಿನಲ್ಲಿ ಮರಳುವಾಗ ಅಪಘಾತ ಉಂಟಾಗಿದೆ. ಅಪಘಾತದಿಂದ ಕಾರು ನಜ್ಜುಗುಜ್ಜಾಗಿದೆ. ಗ್ರಾಮದ ಜನರೆಲ್ಲ ಸ್ಥಳಕ್ಕೆ ಧಾವಿಸಿ, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಕೆಲವು ಸಮಯದ ಬಳಿಕ ಸ್ಥಳಕ್ಕೆ ಬಂದ ಸಂಬಂಧಿಗಳ ಆಕ್ರಂದನ ಮುಗಿಲುಮುಟ್ಟಿತ್ತು. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು