ಗುರುವಾರ , ಜನವರಿ 30, 2020
20 °C

ಸಿಎಂ ಹೆಲಿಕಾಪ್ಟರ್‌ಗೆ ನಿರ್ಮಿಸಿದ್ದ ಹೆಲಿಪ್ಯಾಡ್‌ನಲ್ಲಿ ಕೆಟ್ಟು ರೋಲರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕರೆತರುವ ಹೆಲಿಕಾಪ್ಟರ್ ಭೂಸ್ಪರ್ಶ ಮಾಡಲು ನಿರ್ಮಾಣ ಮಾಡಿರುವ ಹೆಲಿಪ್ಯಾಡ್ ಪಕ್ಕದ ನೆಲವನ್ನು ಸಮತಟ್ಟು ಮಾಡುತ್ತಿದ್ದ ರೋಲರ್ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದ್ದರಿಂದ ಸುಮಾರು 20 ನಿಮಿಷ ಪೊಲೀಸರು ಮತ್ತು ಅಧಿಕಾರಿಗಳು ಆತಂಕ ಅನುಭವಿಸಿದ ಪ್ರಸಂಗ ಜಿಲ್ಲೆಯ ದೇವದುರ್ಗ ತಾಲ್ಲೂಕು ತಿಂಥಣಿ ಬ್ರಿಡ್ಜ್ ಬಳಿ ಸೋಮವಾರ ಬೆಳಿಗ್ಗೆ ನಡೆಯಿತು.

ಬಳ್ಳಾರಿಯಿಂದ ಬೆಳಿಗ್ಗೆ 11.30ಕ್ಕೆ ಹೆಲಿಕಾಪ್ಟರ್ ಮೂಲಕ ಹೊರಟಿದ್ದು, ಮಧ್ಯಾಹ್ನ 12.15 ಕ್ಕೆ ತಿಂಥಣಿ ತಲುಪಲಿದೆ. ಈ ಮಧ್ಯೆ 11.30ಕ್ಕ  ರೂಲರ್ ಕೆಟ್ಟು ನಿಂತುಕೊಂಡಿತ್ತು. ಕೊನೆಗೂ ಹರಸಾಹಸ ಮಾಡಿ, ಹೆಲಿಪ್ಯಾಡ್ ಜಾಗದಿಂದ ರೂಲರ್ ತೆರವು ಮಾಡಿಸಲಾಗಿದ್ದು, ಆನಂತರ ಅಧಿಕಾರಿಗಳು ನೆಮ್ಮದಿ ನಿಟ್ಟುಸಿರು ಬಿಡುವಂತಾಯಿತು.

ಪ್ರತಿಕ್ರಿಯಿಸಿ (+)