ಸೋಮವಾರ, ಮೇ 23, 2022
26 °C

ಸುರಕ್ಷಿತ ತಾಯ್ತನ ಅರಿವಿಗಾಗಿ ಮ್ಯಾರಾಥಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 

ರಾಯಚೂರು: ಗರ್ಭೀಣಿಯರಿಗೆ ಪ್ರಸವದ ವೇಳೆ ಹಾಗೂ ಪ್ರಸವದ ನಂತರ ಸುರಕ್ಷಿತವಾದ ಆರೈಕೆ ದೊರಕಿಸಬೇಕು. ಇದರಿಂದ ಗರ್ಭೀಣಿಯರ ಸಾವು ತಡೆಗಟ್ಟಬಹುದು ಎಂಬುದರ ಕುರಿತು ಅರಿವು ಮೂಡಿಸುವುದಕ್ಕಾಗಿ ರಾಯಚೂರಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದಿಂದ ಸೋಮವಾರ ಮ್ಯಾರಾಥಾನ್‌ ಆಯೋಜಿಸಲಾಗಿತ್ತು.

ಶಾಸಕ ಡಾ.ಶಿವರಾಜ ಪಾಟೀಲ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಮ್ಯಾರಾಥಾನ್‌ಗೆ ಹಸಿರು ನಿಶಾನೆ ತೋರಿಸಿದರು.

ಐಎಂಎ ಸಭಾಂಗಣದವರೆಗೂ ನಡೆದ ಮ್ಯಾರಾಥಾನ್‌ನಲ್ಲಿ ರಾಯಚೂರಿನ ಮಹಿಳಾ ವೈದ್ಯರ ಸಂಘ ’ಸ್ಫೂರ್ತಿ‘ ಸದಸ್ಯೆಯರು, ರಿಮ್ಸ್‌ ಮತ್ತು ನವೋದಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ರಾಯಚೂರಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ.ಮಂಗಳಾ ಗದ್ವಾಲ್‌, ಕಾರ್ಯದರ್ಶಿ ಡಾ.ಸುಷ್ಮಾ ಎಂ. ಮತ್ತಿತರರು ಮ್ಯಾರಾಥಾನ್‌ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.