ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುದಗಲ್: ಕಲ್ಲುಗಳಿಗೆ ಜೀವಕಳೆ ತುಂಬುವ ನೂರ್ ಸಂತ್ರಾಜ್‌

ಮುದಗಲ್‌ನ ಕಲಾವಿದನ ಕೈಹಿಡಿದ ಶಿಲ್ಪಕಲೆ
Published : 4 ಆಗಸ್ಟ್ 2024, 5:40 IST
Last Updated : 4 ಆಗಸ್ಟ್ 2024, 5:40 IST
ಫಾಲೋ ಮಾಡಿ
Comments

ಮುದಗಲ್: ಪಟ್ಟಣದ ಹಳೆಪೇಟೆಯ ನಿವಾಸಿ ನೂರ್ ಮಹ್ಮದ್ ಸಂತ್ರಾಜ್ ಅವರ ಕುಟುಂಬಕ್ಕೆ  ಶಿಲ್ಪಕಲೆ ಜೀವಾಳವಾಗಿದೆ.

ಇವರ ಅಜ್ಜನ ಕಾಲದಿಂದಲೂ ಬಗೆ ಬಗೆಯ ಶಿಲ್ಪಗಳನ್ನು ನಿರ್ಮಾಣ ಕಾರ್ಯ ಮಾಡುತ್ತಿದ್ದಾರೆ. ನಿರ್ಮಿಸಿದ ರಥದ ಚಕ್ರ, ಗರುಡಗಂಭ, ದೀಪಸ್ಥಂಭ, ದೇವಾಲಯ, ಗದ್ದುಗೆ ಗಲ್ಲು, ಬಿಲ್ಲಿ, ಬೋದ, ಈಶ್ವರ ಲಿಂಗ, ನಂದಿ ಮೂರ್ತಿ, ಹನುಮಂತ, ವೀರಭದ್ರ, ಬುದ್ಧ, ನಾಗಶಿಲ್ಪ ಸೇರಿದಂತೆ ಅಲಂಕಾರ ಶಿಲ್ಪಗಳು ಸಾರ್ವಜನಿಕರ ಬದುಕಿನ ನೃತ್ಯ, ಸಂಗೀತ, ಮೊದಲಾದ ವಿನೋದಗಳು, ಬೇಟೆಯ ಸನ್ನಿವೇಶ ಮೊದಲಾದವನ್ನು ವಸ್ತುವನ್ನಾಗಿಸಿಕೊಂಡು ಶಿಲ್ಪಗಳನ್ನು ಮಾಡಿದ್ದಾರೆ.

ತನ್ನದೆ ಆದ ವೈಶಿಷ್ಟ್ಯವನ್ನು ಹೊಂದಿರುವ ಇವರ ಶಿಲ್ಪಕಲೆ 20ಕ್ಕೂ ಹೆಚ್ಚು ದೇವಾಲಯದ ಕಂಬಗಳು, ದೇವಕೋಷ್ಠಗಳಲ್ಲಿ ಅಲಂಕರಣ ಹರಳುಗೊಂಡಿವೆ. ಕೈಗಳಿಂದ ಚಿತ್ರಗಳ ಕೆತ್ತನೆ ಮಾಡುವುದರಿಂದ ಬಹಳ ದಿನ ಬಾಳಿಕೆ ಬರುತ್ತಿದೆ ಎಂದು ರಾಜ್ಯದ ಮೈಸೂರು, ತುಮಕೂರು, ಬೆಳಗಾವಿ, ಬೀದರ್‌, ವಿಜಯಪುರ, ಕಲಬುರಗಿ, ಕೊಪ್ಪಳ, ಬಳ್ಳಾರಿ, ಧಾರವಾಡ, ಗದಗ, ಬಾಗಲಕೋಟೆ ಸೇರಿ 18 ಜಿಲ್ಲೆಗಳು ಅಲ್ಲದೇ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲೂ  ನಿರ್ಮಿಸಿದ ಶಿಲ್ಪಕಲೆಗಳು ರಫ್ತಾಗಿವೆ.

ಶಿಲ್ಪಗಳಲ್ಲಿ ರಥಶಿಲ್ಪ, ವಾಸ್ತುಶಿಲ್ಪ, ನಗರ ಶಿಲ್ಪ, ಯಂತ್ರ ಶಿಲ್ಪಗಳು ಸೇರಿದಂತೆ ಹಲವು ವಿಧ ಶಿಲ್ಪಗಳಲ್ಲಿ ಇವರ ರಥಶಿಲ್ಪದ ಚಕ್ರಗಳಿಗೆ ಬಾರಿ ಬೇಡಿಕೆ ಇದೆ. ಇವರ ಬಳಸುವ ಮುದಗಲ್‌ನ ಶ್ವೇತ ವರ್ಣದ ಶಿಲೆ ಗಟ್ಟಿಯಾಗಿದ್ದರಿಂದ ಬಹಳ ದಿನ ಬಾಳಿಕೆ ಬರುತ್ತಿದೆ ಎನ್ನುವ ನಂಬಿಕೆಯಿಂದ ಚಕ್ರಗಳಿಗೆ ಬೇಡಿಕೆ ಹೆಚ್ಚಿದೆ.

ರಥದ ಚಕ್ರಗಳಲ್ಲಿ ಒಂಟಿ ಹೂವು, ಜೋಡಿ ಹೂವು, ತೆಂಗಿನ ಆಕಾರ, ಕಮಾನು ಆಕಾರ, ಲತಾ ಬಳ್ಳಿಗಳು, ಕುಂಭದ ಆಕಾರದಲ್ಲಿ ನಿರ್ಮಿಸಲಾಗುತ್ತದೆ. ರಥದ ಬಾಯಿ ಬಳಿ ಗಟ್ಟಿಯಾದ ಲೋಹಗಳನ್ನು ಬಳಿಸುವುದರಿಂದ ಶಾಶ್ವತವಾಗಿ ಉಳಿಯುತ್ತದೆ ಎನ್ನುತ್ತಾರೆ ಮಹ್ಮದ್ ಸಂತ್ರಾಜ್ ಅವರು.

ಇವರು ನಿರ್ಮಿಸಿದ ರಾಚನಿಕ ಮಂದಿರಗಳ ಬಗೆ ಬಗೆಯ ಆಕಾರಗಳ ಕಂಬಗಳು ದೇವಾಲಯದ ಸೌಂದರ್ಯ ಹೆಚ್ಚಿಸಿವೆ. ಈ ಕಂಬಗಳಲ್ಲಿ ಬ್ರಹ್ಮಕಾಂತ ಕಂಬಗಳು ಸಿಂಹಪಾಲು ಪಡೆದಿವೆ. ಕಂಬಗಳಲ್ಲಿ ಉಬ್ಬುಶಿಲ್ಪಗಳು ಹಾಗೂ ಕೀರ್ತಿಮುಖಗಳು, ಮುತ್ತಿನ ಮಾಲೆಗಳು, ಪ್ರಾಣಿಗಳು, ಪಷ್ಪ ನಕ್ಷೆಗಳ ಅಲಂಕಾರ ಪಟ್ಟಿಕೆಗಳಿವೆ. ಗರುಡಗಂಭ, ದೀಪಸ್ಥಂಭಗಳ ನಿರ್ಮಾಣದಲ್ಲಿ ಶೈವ ಮತ್ತು ವೈಷ್ಣವ ಧರ್ಮಗಳನ್ನಾಗಿ ಬೇರ್ಪಡಿಸುವ ಕಲಾತ್ಮಕ ಕಂಬಗಳು ವಿಭಿನ್ನ ಬಗೆಯದ್ದಾಗಿವೆ. ನಾಲ್ಕು, ಹನ್ನೇರಡು ಹಾಗೂ ಹದಿನಾರು ಕಂಬದ ದೇವಾಲಯಗಳನ್ನು ನಿರ್ಮಾಣ ಮಾಡಿದ ಅನುಭವ ಇದೆ. ಕಂಬಗಳಲ್ಲಿ ನಿರ್ಮಿಸುವ ವೃತ್ತ ಹಾಗೂ ತರಂಗ ಬೋದಿಗಳು ವಿಶೇಷ ಆಕರ್ಷಣೆ ಪಡೆದಿವೆ.

ಶೈವ, ವೈಷ್ಣವ, ಬೌದ್ಧ, ಜೈನ ಮೊದಲಾದ ಮತ ಸಂಪ್ರದಾಯದವರಲ್ಲಿ ನಾಗಪೂಜೆ ಮಹತ್ವ ಪಡೆದಿದೆ. ಈ ಎಲ್ಲಾ ಧರ್ಮದವರು ನಾಗಶಿಲ್ಪಗಳನ್ನು ಕೆತ್ತಿಸಿಕೊಂಡು ಹೋಗುತ್ತಿದ್ದಾರೆ.

ನೂರ್ ಮಹ್ಮದ್ ಸಂತಾಜ್ ಅವರ ಅಜ್ಜನ ಕಾಲದಿಂದ ಬಳುವಳಿಯಾಗಿ ಬಂದಿರುವ ಕಲೆ ನಮ್ಮ ಬದುಕಿನ ಜೀವಾಳವಾಗಿದೆ. ತಮ್ಮಲ್ಲಿರುವ ಕಲೆ ತಮ್ಮ ಮಕ್ಕಳಿಗೆ ಧಾರೆ ಎರೆದಿದ್ದಾರೆ. 60 ಇಳಿ ವಯಸ್ಸಿನಲ್ಲಿಯೂ ಕೆತ್ತನೆ ಕೆಲಸ ನಿಲ್ಲಿಸಿಲ್ಲ. ಇವರ ಶಿಲ್ಪಕಲೆ ಕೆತ್ತನೆ ಕಾರ್ಯ ಗಮನಿಸಿದ ದೆಹಲಿಯ ಶ್ರೀಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ ಸಂಸ್ಥೆಯು ಶ್ರೀ ಕೃಷ್ಣದೇವರಾಯ ರಾಷ್ಟ್ರೀಯ ಪ್ರಶಸ್ತಿ, ಸೇರಿದಂತೆ ಇನ್ನಿತರ ಪ್ರಶಸ್ತಿಗಳು ಬಂದಿವೆ. ಲಿಂಗಸುಗೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸಿದೆ.

ನಾವು ಚಿಕ್ಕ ವಯಸ್ಸಿನಲ್ಲಿಯೇ ನಮ್ಮ ತಂದೆಯವರಿಂದ ಶಿಲ್ಪ ಕೆತ್ತನೆ ಕಲೆ ಕಲಿತಿದ್ದೇನೆ. ನಾನು ನನ್ನ ಮಕ್ಕಳಿಗೆ ಕಲಿಸಿದ್ದೇನೆ.
ನೂರ್ ಮಹ್ಮದ್ ಸಂತಾಜ್
ಹಳೆಪೇಟೆಯ ನೂರ್ ಮಹ್ಮದ್ ಸಂತ್ರಾಜ್ ಅವರು ವಿಶೇಷ ಆಕರ್ಷಣೆ ಶಿಲ್ಪಗಳಿಗೆ ಜೀವ ಕಳೆ ತುಂಬುವ ಕೆಲಸ ಮಾಡುತ್ತಿದ್ದಾರೆ.
ಸಂಗಮೇಶ ಹಿರೇಮಠ, ಚಿತ್ರಕಲೆ ಶಿಕ್ಷಕ, ಮುದಗಲ್
 ರಥದ ಚಕ್ರ ನಿರ್ಮಾಣ ಮಾಡುತ್ತಿರುವ ಸಹಕಲಾವಿದರು
 ರಥದ ಚಕ್ರ ನಿರ್ಮಾಣ ಮಾಡುತ್ತಿರುವ ಸಹಕಲಾವಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT