ಸಿಂಧನೂರಿನ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲಿನ ದಾಳಿ ಖಂಡಿಸಿ ಮಂಗಳವಾರ ಮಿನಿವಿಧಾನಸೌಧ ಮುಂದೆ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಚಿಂತಕ ಶಿವಸುಂದರ ಮಾತನಾಡಿದರು
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಜೈ ಭೀಮ್ ಎಂದು ಅಧಿಕಾರ ಸ್ವೀಕರಿಸಿದ ಮೊದಲಿಗರು. ಅದನ್ನು ಸನಾತನವಾದಿಗಳು ಸಹಿಸುತ್ತಿಲ್ಲ. ಪ್ರಸ್ತುತ ಜೈ ಭೀಮ್ ಮತ್ತು ಜೈ ಶ್ರೀರಾಮ ನಡುವೆ ಕದನ ನಡೆಯುತ್ತಿದ್ದು ಹಂಚಿ ಹೋಗಿರುವ ನಾವೆಲ್ಲರೂ ಸಂಘಟಿತ ಹೋರಾಟ ನಡೆಸಬೇಕಾಗಿದೆ