ಸಿಂಧನೂರು: ಫೆ.3 ರಂದು ಸಂಜೆ 5 ಗಂಟೆಗೆ ಸಿಂಧನೂರು ನಗರದ ಹೊರವಲಯದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ರೈಲು ಚಲಿಸುತ್ತಿದ್ದಂತೆ ಹಿಂಭಾಗದ ಬೋಗಿಯ ಚಕ್ರಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಪ್ರೇಮ ಪ್ರಕರಣವೇ ಕಾರಣವೆಂದು ತಿಳಿದು ಬಂದಿದೆ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಪ್ರಥಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿರುವ ಸುಮಂಗಲಾ (21) ಮಾನ್ವಿ ತಾಲ್ಲೂಕಿನ ನೀರಮಾನ್ವಿ ಸಮೀಪದ ಸೀಕಲ್ ತಾಂಡಾದ ನಿವಾಸಿ ಗೋಪಾಲ ಅವರ ಪುತ್ರಿ. ಈ ವಿದ್ಯಾರ್ಥಿನಿಯು ನಗರದ ಕುಷ್ಟಗಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿದ್ದಳು.

ಆತ್ಮಹತ್ಯೆ ಮಾಡಿಕೊಳ್ಳುವ ಪೂರ್ವದಲ್ಲಿ ವಿದ್ಯಾರ್ಥಿನಿ ಸುಮಂಗಲಾ, ‘ಅಣ್ಣ, ಅಕ್ಕ, ಅತ್ತಿಗೆ ಹಾಗೂ ಕುಟುಂಬದ ಸದಸ್ಯರೆಲ್ಲರಿಗೂ ನಾನು ಪ್ರೀತಿಸಿದ ಹುಡುಗನನ್ನೇ ಮದುವೆ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದೇನೆ. ಆದರೆ ನೀವು ಒಪ್ಪುತ್ತಿಲ್ಲ. ಈಗಾಗಲೇ ನನ್ನ ಜೀವನ ಹಾಳಾಗಿದೆ. ಮರ್ಯಾದೆಯೂ ಹೋಗಿದೆ. ಹೀಗಾಗಿ ನಾನು ಒಂದು ಕಡೆ ಬಂದು ಸಾಯುತ್ತಿದ್ದೇನೆ. ಆ ಹುಡುಗನಿಗೆ ಯಾವುದೇ ತೊಂದರೆ ಕೊಡಬೇಡಿರಿ. ಕೊಟ್ಟರೆ ಅವನು ಸಹ ಆತ್ಮಹತ್ಯೆ ಮಾಡಿಕೊಳ್ಳಬಹುದು. ನೀವೆಲ್ಲರೂ ಚೆನ್ನಾಗಿರಿ. ನಮ್ಮ ಬಗ್ಗೆ ಚಿಂತಿಸಬೇಡಿ. ನನ್ನ ಸಾವಿನ ಬಗ್ಗೆ ನಿಮಗೆ ಗೊತ್ತಾಗುತ್ತದೆ’ ಎಂದು ಮೊಬೈಲ್ನಲ್ಲಿ ಲಂಬಾಣಿ ಭಾಷೆಯಲ್ಲಿ ವಾಯಿಸ್ ರಿಕಾರ್ಡಿಂಗ್ ಮಾಡಿ ಪಾಲಕರಿಗೆ ಕಳುಹಿಸಿರುವುದು ಬೆಳಕಿಗೆ ಬಂದಿದೆ.

ರಮೇಶ ರಾಠೋಡ್ ಎನ್ನುವ ಯುವಕ ಮತ್ತು ಸುಮಂಗಲಾ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರು ಮದುವೆ ಆಗಲು ಸಹ ನಿರ್ಧರಿಸಿದ್ದರು. ಆದರೆ ಇದಕ್ಕೆ ಸುಮಂಗಲಾ ಪಾಲಕರು ಒಪ್ಪಿಲ್ಲ ಎಂದು ತಿಳಿದು ಬಂದಿದೆ. ಈ ಪ್ರಕರಣವು ರಾಯಚೂರಿನ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆದರೆ ಪ್ರಕರಣದ ವಿವರಣೆಯ ಬಗ್ಗೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದರು.

ಭೇಟಿ-ಮಾಹಿತಿ ಸಂಗ್ರಹ: ಲಿಂಗಸುಗೂರಿನ ಪ್ರೊಬೇಶನರಿ ತಹಶೀಲ್ದಾರ್ ತುಳಜಾರಾಮ್ ಸಿಂಗ್, ಆರ್ಸಿಎಚ್ಓ ನಂದಿತಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ.ವೆಂಕಟೇಶ, ಪರಿಶಿಷ್ಟ ಪಂಗಡ ವರ್ಗಗಳ ಕಲ್ಯಾಣಾಧಿಕಾರಿ ಭೀಮಣ್ಣ ಅವರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಫೆ.4 ರಂದು ಭೇಟಿ ನೀಡಿ ಸಂಜೆ 4 ರಿಂದ 7 ರವರೆಗೆ ಮೇಲ್ವಿಚಾರಕಿ ಮಂಜುಳಾ ಸೇರಿದಂತೆ ಅಡುಗೆ ಸಿಬ್ಬಂದಿ, ಕಾವಲುಗಾರರು ಮತ್ತು ವಿದ್ಯಾರ್ಥಿನಿಯರನ್ನು ವಿಚಾರಿಸಿ ಮಾಹಿತಿ ಪಡೆದುಕೊಂಡರು.

ವಿದ್ಯಾರ್ಥಿನಿ ಸೀಕಲ್ ತಾಂಡಾದ ನಿವಾಸಿ ಮೊಬೈಲ್ನಲ್ಲಿ ಪಾಲಕರಿಗೆ ವಾಯಿಸ್ ರೆಕಾರ್ಡಿಂಗ್ ಅಧಿಕಾರಿಗಳ ತಂಡ ಭೇಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.