ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಅವರಿಗೆ ಏಕವಚನ ಬಳಕೆ: ಅನಂತಕುಮಾರ ಹೆಗಡೆ ವಿರುದ್ಧ ಕುರುಬ ಸಮಾಜ ಕಿಡಿ

Published 20 ಜನವರಿ 2024, 15:41 IST
Last Updated 20 ಜನವರಿ 2024, 15:41 IST
ಅಕ್ಷರ ಗಾತ್ರ

ರಾಯಚೂರು: ಸಂಸದ ಅನಂತಕುಮಾರ ಹೆಗಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಸಂಬೋಧಿಸಿ, ನಿಂದಿಸಿರುವುದು ಖಂಡನೀಯ. ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರಲ್ಲಿ ಅನಂತಕುಮಾರ ಕ್ಷಮೆಯಾಚಿಸಬೇಕು ಎಂದು ಕುರುಬ ಸಮಾಜದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಸವಂತಪ್ಪ ಹೇಳಿದರು.

ಸುಸಂಸ್ಕೃತ ಸಮಾಜದಲ್ಲಿ ಹುಟ್ಟಿದ ಅನಂತಕುಮಾರ ಮುಖ್ಯಮಂತ್ರಿಯವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಅವರ ಬಗ್ಗೆ ಮಾತನಾಡುವ ಯೋಗ್ಯತೆಯೂ ಸಂಸದರಿಗೆ ಇಲ್ಲ ಎಂದು ಮಾಧ್ಯಮ ಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.

ಸಂಸದರಾಗಿ ನಾಲ್ಕು ವರ್ಷ ಏನೂ ಕೆಲಸ ಮಾಡದೆ ಈಗ ಚುನಾವಣೆ ಸಮೀಪಿಸಿದಾಗ ರಾಜಕೀಯ ಕಾರಣಕ್ಕಾಗಿ ಏಕ ವಚನದಲ್ಲಿ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಲುಮತ ಸಮಾಜದ ಎರಡನೇ ಆರಾಧ್ಯದೈವ ಇಂತವರಿಗೆ ಏಕವಚನದಲ್ಲಿ  ಮಾತನಾಡಿದರೆ ಸಹಿಸಿಕೊಳ್ಳುವುದಿಲ್ಲ. ರಾಯಚೂರಿಗೆ  ಕಾಲಿಟ್ಟರೆ ಅನಂತಕುಮಾರಿಗೆ ಕಲ್ಲಿನಿಂದ ಹೊಡೆಯುತ್ತೇವೆ ಎಂದು ಎಚ್ಚರಿಸಿದರು.

‌ ಸಮಾಜದ ಮುಖಂಡರಾದ ಈಶಪ್ಪ, ನಾಗರಾಜ, ಹನುಮಂತಪ್ಪ, ಭೀರಪ್ಪ, ನಾಗೇಂದ್ರಪ್ಪ ಮಟಮಾರಿ, ಸಂಗಮೇಶ, ಕೆ.ಬಸವರಾಜ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT