ಹಟ್ಟಿ ಚಿನ್ನದ ಗಣಿ: ‘ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ದನಗಳ ಮಾಲೀಕರು ಅವುಗಳನ್ನು ಸುಪರ್ದಿಗೆ ಪಡೆಯದಿದ್ದರೆ ಗೋ ಶಾಲೆಗೆ ಸಾಗಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಗನ್ನಾಥ ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯ ರಸ್ತೆಯಲ್ಲಿ ದನಗಳ ಹಾವಳಿ ಹೆಚ್ಚಿದ ಕುರಿತು ಜನರಿಂದ ದೂರುಗಳು ಬಂದಿವೆ. ಹಲವರಿಗೆ ನೋಟಿಸ್ ನೀಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದಿದ್ದಾರೆ.
ಆ.25 ರೊಳಗೆ ದನಗಳ ಮಾಲೀಕರು ತಮ್ಮ ದನಗಳನ್ನು ವಶಕ್ಕೆ ಪಡೆದು ಪಾಲನೆ ಮಾಡಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.