ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ದೀಪಾವಳಿ ಮೆರಗು ಹೆಚ್ಚಿಸಿದ ಬೀದಿದೀಪಗಳು

Last Updated 4 ನವೆಂಬರ್ 2021, 14:19 IST
ಅಕ್ಷರ ಗಾತ್ರ

ರಾಯಚೂರು: ನಗರ ವ್ಯಾಪ್ತಿಯಲ್ಲಿ ಲಿಂಗಸುಗೂರು ಮಾರ್ಗದ ರಾಜ್ಯಹೆದ್ದಾರಿಯಲ್ಲಿರುವ ವಿದ್ಯುತ್‌ ಕಂಬಗಳು ಕೆಲವು ದಿನಗಳಿಂದ ರಾತ್ರಿಯಾಗುತ್ತಿದ್ದಂತೆ ಅಲಂಕಾರಿಕ ವಿದ್ಯುತ್‌ ದೀಪಗಳಿಂದ ಝಗಮಗಿಸುತ್ತಿವೆ.

ನವೆಂಬರ್‌ 1 ರಂದು ಕರ್ನಾಟಕ ರಾಜ್ಯೋತ್ಸವ ದಿನದಿಂದ ಈ ಬದಲಾವಣೆ ಆಗಿದೆ. ಎಲ್‌ಇಡಿ ಮಿಣುಕು ದೀಪಗಳ ಸರವನ್ನು ವಿದ್ಯುತ್‌ ಕಂಬದ ಕೆಳಭಾಗದಿಂದ ಮೇಲ್ಭಾಗದವರೆಗೂ ಸುತ್ತಲಾಗಿದೆ. ಇಡೀ ಕಂಬವು ಬೀದಿಗೆ ಬೆಳಕು ಚೆಲ್ಲುವುದನ್ನು ನೋಡುವುದು ಕಣ್ಣಿಗೆ ಹಬ್ಬ. ಈಗ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಬೀದಿಕಂಬಗಳು ನಗರದ ಮೆರುಗು ಹೆಚ್ಚಿಸಿವೆ.

ಸಾಮಾನ್ಯವಾಗಿ ಹೈದರಾಬಾದ್‌, ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೆಲವು ಬೀದಿ ಕಂಬಗಳಿಗೆ ಮಾತ್ರ ಈ ರೀತಿ ವಿದ್ಯುತ್‌ ದೀಪಗಳನ್ನು ಅಲಂಕಾರಿಕವಾಗಿ ಅಳವಡಿಸಿರುವುದನ್ನು ಕಾಣಬಹುದು. ಪ್ರವಾಸಿ ತಾಣಗಳಲ್ಲೂ ಜನರಿಗೆ ನವೋಲ್ಲಾಸ ತುಂಬುವುದಕ್ಕೆ ದೀಪಗಳನ್ನು ಬೆಳಗಿಸುವುದು ಯಥೇಚ್ಛವಾಗಿದೆ. ಇದೀಗ ಕೋಟೆಗಳ ನಗರ ರಾಯಚೂರು ಸೌಂದರ್ಯೀಕರಣದತ್ತ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರವು ಚಿತ್ತ ಹರಿಸಿದ್ದು ವಿಶೇಷ.

ಅಸ್ಕಿಹಾಳದಿಂದ ಬಸವೇಶ್ವರ ವೃತ್ತದವರೆಗೂ 96 ವಿದ್ಯುತ್‌ ಕಂಬಗಳಿಗೆ ಮೊದಲ ಹಂತದಲ್ಲಿ ಮಿಣುಕು ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿತ್ತು. ಆನಂತರ ಬಸವೇಶ್ವರ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದವರೆಗಿನ ರಸ್ತೆ ವಿಭಜಕದ ವಿದ್ಯುತ್‌ ಕಂಬಗಳು ಕೂಡಾ ಕಣ್ಣು ಕೊರೈಸುವಂತೆ ಹೊಳೆಯುವಂತೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಪಿಎಂಸಿ ಎದುರಿನ ಕನಕನದಾಸ ವೃತ್ತದಿಂದ ಗೋಶಾಲಾ, ಅಲ್ಲಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದವರೆಗೂ ದೀಪಗಳನ್ನು ಅಳವಡಿಸಲಾಗುತ್ತಿದೆ. ‘ಜಗಜೀವನರಾಂ ವೃತ್ತ ಹಾಗೂ ಅಂಬಿಗರ ಚೌಡಯ್ಯ ವೃತ್ತದವರೆಗಿನ ವಿದ್ಯುತ್‌ ಕಂಬಗಳಿಗೂ ಹೊಳೆಯುವ ಎಲ್‌ಇಡಿ ದೀಪ ಅಳವಡಿಸುವ ಯೋಜನೆ ಮಾಡಲಾಗಿದೆ’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೈ.ಗೋಪಾಲರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದಲ್ಲಿ ಮೂಲಸೌಕರ್ಯ ಹಾಗೂ ಸೌಂದರ್ಯೀಕರಣಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಮಾಡಿಕೊಡುವುದಕ್ಕೆ ಅವಕಾಶವಿದೆ. ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋಗುವ ಜವಾಬ್ದಾರಿ ನಗರಸಭೆಗೆ ಸಂಬಂಧಿಸಿದ್ದು. ಅಲಂಕಾರಿಕ ದೀಪ ಅಳವಡಿಸುವ ಯೋಜನೆ ಕೈಗೊಳ್ಳುವ ಪೂರ್ವದಲ್ಲಿ ನಗರಸಭೆಯೊಂದಿಗೆ ಚರ್ಚಿಸಲಾಗಿದೆ’ ಎಂದರು.

‘ರಾಯಚೂರು ನಗರದಲ್ಲಿ ಮೂಲಸೌಕರ್ಯ ಸಮಸ್ಯೆ ವಿಪರೀತವಾಗಿದೆ. ಸುಕ್ಷೇತ್ರ ಮಂತ್ರಾಲಯ ಹಾಗೂ ಶ್ರೀಶೈಲಕ್ಕೆ ನೂರಾರು ಭಕ್ತರು ಪ್ರತಿದಿನ ರಾಯಚೂರಿನ ಮೂಲಕ ತೆರಳುತ್ತಾರೆ. ಭಕ್ತರಿಗೆ ಉಚಿತವಾಗಿ ಶುದ್ಧನೀರು ಒದಗಿಸುವುದು ಸೇರಿದಂತೆ ನೇರವಾಗಿ ಅನುಕೂಲವಾಗುವ ಯಾವುದೇ ಕೆಲಸಗಳನ್ನು ಯಾರೂ ಮಾಡುತ್ತಿಲ್ಲ. ಕನಿಷ್ಠಪಕ್ಷ ನಗರವನ್ನು ನೋಡಿ ಹೊರಗಿನಿಂದ ಬಂದವರು ಸಂತೋಷಪಡುವಂತಹ ಕಾರ್ಯ ಪ್ರಾಧಿಕಾರದವರು ಮಾಡಿರುವುದು ಸ್ವಾಗತಾರ್ಹ’ ಎಂದು ಸಾಮಾಜಿಕ ಕಾರ್ಯಕರ್ತ ನರಸಿಂಹಲು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT