ಗುರುವಾರ , ಏಪ್ರಿಲ್ 15, 2021
19 °C
ಟೇಲೆಂಡ್ ರೈತರ ಗೋಳು ಕೇಳೋರ್ಯಾರು?

ತುಂಗಭದ್ರಾ: ಕೊನೆಯ ಭಾಗಕ್ಕೆ ತಲುಪದ ನೀರು

ಬಸವರಾಜ ಭೋಗಾವತಿ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ: ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ಭಾಗಕ್ಕೆ ನೀರು ಸಮರ್ಪಕವಾಗಿ ಹರಿಯದೇ ತಾಲ್ಲೂಕಿನ ಟೇಲೆಂಡ್ ರೈತರು ತೊಂದರೆ ಅನುಭವಿಸುವಂತಾಗಿದೆ.

ತುಂಗಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ ಸಭೆ) ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿಗೊಳಿಸು
ವಲ್ಲಿ ಜಿಲ್ಲಾಡಳಿತ ಹಾಗೂ ಜಲಸಂಪ ನ್ಮೂಲ ಇಲಾಖೆಯ ಅಧಿಕಾರಿಗಳು ವಿಫಲರಾಗಿರುವುದು ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ವಿತರಣಾ ಕಾಲುವೆಗಳಾದ ನಂ.76, 85, 89, 90, 91, 92 ಸೇರಿದಂತೆ ಟೇಲೆಂಡ್ ವ್ಯಾಪ್ತಿಯ ಕಾಲುವೆಗಳಲ್ಲಿ ನೀರು ಹರಿಯದ ಕಾರಣ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಸಜ್ಜೆ , ಮೆಣಸಿ ನಕಾಯಿ, ಹೈಬ್ರಿಡ್ ಜೋಳ ಬೆಳೆಗಳ ಇಳು ವರಿ ಕುಂಠಿತಗೊಂಡು ರೈತರು ನಷ್ಟ ಅನುಭವಿಸುವಂತಾಗಿದೆ. ಬೇಸಿಗೆ ಬೆಳೆ ಗಾಗಿ ಭತ್ತ ನಾಟಿಗೆ ಮುಂದಾಗಿರುವ ರೈತರಿಗೂ ನೀರಿನ ಸಮಸ್ಯೆ ಉಂಟಾಗಿದೆ.

ತುಂಗಭದ್ರಾ ಯೋಜನೆಯ ಸಿರವಾರ ಮುಖ್ಯ ವಿಭಾಗಕ್ಕೆ ಒಳಪಡುವ ಮಾನ್ವಿ, ಹಿರೇಕೊಟ್ನೇಕಲ್, ಕವಿತಾಳ ಹಾಗೂ ಸಿರವಾರ ಉಪ ವಿಭಾಗದ ವ್ಯಾಪ್ತಿಯಲ್ಲಿ 1.75 ಲಕ್ಷ ಎಕರೆ ಭೂಮಿ ಅಧಿಕತ ನೀರಾವರಿ ಸೌಲಭ್ಯ ಹೊಂದಿದೆ. ಆದರೆ ಈ ಭಾಗದ ರೈತರು ನಿರಂತರವಾಗಿ ಹಲವು ವರ್ಷಗಳಿಂದ ಕಾಲುವೆಯಲ್ಲಿ ನೀರಿನ ಕೊರತೆಯಿಂದ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ.

ಹುದ್ದೆ ಖಾಲಿ: ಸಿರವಾರ ಮುಖ್ಯ ವಿಭಾಗದ 4 ಉಪ ವಿಭಾಗಗಳಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಎಂಜಿನಿಯರ್ ಸೇರಿ 24 ಸೆಕ್ಷನ್ ಅಧಿಕಾರಿ ಹುದ್ದೆಗಳು ಖಾಲಿ ಇವೆ.

‘ಬೆರೆಳೆಣಿಕೆಯಷ್ಟು ಪ್ರಭಾರಿ ಎಂಜಿನಿ ಯರ್‌ಗಳು, ಗ್ಯಾಂಗ್‍ಮನ್‍ಗಳು ಹಾಗೂ ಹೊರಗುತ್ತಿಗೆ ಸಿಬ್ಬಂದಿಯಿಂದ ಕಾಲುವೆ ನೀರಿನ ಸಮರ್ಪಕ ನಿರ್ವ ಹಣೆ ಸಾಧ್ಯವಾಗುತ್ತಿಲ್ಲ. ಅಗತ್ಯ ಸಿಬ್ಬಂದಿ ನೇಮಕ್ಕೆ ಜನಪ್ರತಿನಿಧಿಗಳು ಗಮನಹರಿಸಿಲ್ಲ’ ಎನ್ನುತ್ತಾರೆ ರೈತರು.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಟೇಲೆಂಡ್ (ಕೊನೆಯ ಭಾಗ) ಭಾಗಕ್ಕೆ ನೀರು ತಲುಪಲು ಮುಖ್ಯ ಕಾಲುವೆಗೆ ಪ್ರತಿ ದಿನ 3,800 ಕ್ಯುಸೆಕ್ ನೀರು ಹರಿಸಬೇಕು. ಆದರೆ, ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣದ ಆಧಾರದಲ್ಲಿ ಐಸಿಸಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಈಗ ಪ್ರತಿ ದಿನ 3,210 ಕ್ಯುಸೆಕ್ ನೀರು ಹರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಪ್ರಮಾಣದ ನೀರು ಕೊನೆಭಾಗಕ್ಕೆ ತಲುಪಲು ಮುಖ್ಯ ಕಾಲುವೆಯ ಮಸ್ಕಿ ಸಮೀಪದ ಮೈಲ್ 69ರಲ್ಲಿ ಪ್ರತಿ ದಿನ 950 ಕ್ಯುಸೆಕ್ ನೀರು ಹರಿಸಬೇಕು. ಆದರೆ ಮೈಲ್ 69ರಲಿ ನಿಗದಿತ ಪ್ರಮಾಣದ ಗೇಜ್ ನಿರ್ವಹಣೆಯಾಗದೆ 650 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದ ಕೊನೆ
ಭಾಗಕ್ಕೆ ನೀರು ತಲುಪುತ್ತಿಲ್ಲ ಎಂಬುದು ರೈತ ಮುಖಂಡರ ದೂರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು