ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ಚುನಾವಣೆಗೆ ತಾಲ್ಲೂಕು ಆಡಳಿತ ಸನ್ನದ್ಧ

ಮಸ್ಕಿ ಕ್ಷೇತ್ರದಲ್ಲಿ ಒಟ್ಟು 231 ಮತಗಟ್ಟೆಗಳು: 207515 ಮತದಾರರು
Last Updated 10 ಏಪ್ರಿಲ್ 2023, 5:40 IST
ಅಕ್ಷರ ಗಾತ್ರ

ಮಸ್ಕಿ: ಮೇ 10ರ ವಿಧಾನಸಭಾ ಚುನಾವಣೆಗೆ ತಾಲ್ಲೂಕು ಆಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕ್ಷೇತ್ರದಲ್ಲಿ ಒಟ್ಟು 231 ಮತಗಟ್ಟೆಗಳಿವೆ. ಆ ಪೈಕಿ 48 ಅತಿಸೂಕ್ಷ್ಮ ಹಾಗೂ ಉಳಿದವುಗಳನ್ನು ಸಾಮಾನ್ಯ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. 101908 ಪುರುಷ, 105600 ಮಹಿಳೆ ಮತ್ತು 17 ಇತರೆ ಸೇರಿ ಒಟ್ಟು 207515 ಮತದಾರರಿದ್ದಾರೆ.

2021ರಲ್ಲಿ ನಡೆದ ಉಪಚುನಾವಣೆ ವೇಳೆ ಒಟ್ಟು 206188 ಮತದಾರರಿದ್ದರು. ಈಗ 1327 ಹೆಚ್ಚುವರಿ ಮತದಾರರು ಸೇರ್ಪಡೆಯಾಗಿದ್ದಾರೆ.

ಚುನಾವಣಾ ಕಾರ್ಯಕ್ಕೆ ನೇಮಕವಾದ ಸಿಬ್ಬಂದಿ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜಕೀಯ ಪಕ್ಷಗಳು ಪ್ರಚಾರ, ಸಭೆ-ಸಮಾರಂಭ ಸೇರಿ ಇತರ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗಿದೆ.

ಧ್ವನಿವರ್ಧಕ ಬಳಕೆ ಸೇರಿ ಇತರ ಚಟುವಟಿಕೆಗೆ ಪರವಾನಗಿ ನೀಡಲು ಚುನಾವಣೆ ಅಧಿಕಾರಿಗಳ ಕಚೇರಿಯಲ್ಲಿ ಪೊಲೀಸರನ್ನು ನಿಯೋ ಜನೆ ಮಾಡಲಾಗಿದೆ. ಚುನಾವಣೆ ದೂರುಗಳನ್ನು ಸ್ವೀಕರಿಸಿ ಪರಿಹರಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಹಾಯವಾಣಿಗೆ ಪ್ರತ್ಯೇಕ ಮೂರು ನಂಬರ್‌ಗಳನ್ನು ಸಹ ನೀಡಲಾಗಿದೆ.

ಮತ ಕ್ಷೇತ್ರಕ್ಕೆ ಅಗತ್ಯವಿರುವ ಇವಿಎಂ, ವಿವಿ ಪ್ಯಾಟ್ ಸೇರಿ ಇತರ ಪರಿಕರಗಳನ್ನು ಶುಕ್ರವಾರ ಬೆಳಗಿನ ಜಾವ ಪಟ್ಟಣದ ದೇವನಾಂಪ್ರಿಯ ಅಶೋಕ ಸರ್ಕಾರಿ ಪದವಿ ಕಾಲೇಜಿಗೆ ಸಾಗಿಸಲಾಗಿದೆ. ಪೊಲೀಸ್ ಭದ್ರತೆಯಲ್ಲಿ ಚನಾವಣಾ ಅಧಿಕಾರಿ ದೇವಿಕಾ ಆರ್. ನೇತೃತ್ವದ ತಂಡ ಕಾಲೇಜಿನ ಭದ್ರತಾ ಕೊಠಡಿಗೆ ಪರಿಕರಗಳನ್ನು ಸಾಗಿಸಿತು. ಇವಿಎಂ, ವಿವಿ ಪ್ಯಾಟ್ ಸೇರಿ ಒಟ್ಟು 857 ಮಷಿನ್‍ ಇಡಲಾಗಿದ್ದು, ಪ್ರಾತ್ಯಕ್ಷಿಕೆ ಕೂಡ ನಡೆಯಲಿದೆ ಎಂದು ಚುನಾವಣಾಧಿಕಾರಿ ದೇವಿಕಾ ಆರ್. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT