ಭಾನುವಾರ, ಏಪ್ರಿಲ್ 2, 2023
31 °C

ವೆಂಕಟೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರವಾರ: ಪಟ್ಟಣದ ಪುರಾತನ ವೆಂಕಟೇಶ್ವರ ದೇವಸ್ಥಾನಕ್ಕೆ ಮುಖ್ಯದ್ವಾರವನ್ನು ಸ್ಥಾಪಿಸುವ ಮೂಲಕ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಭಾನುವಾರ ಚಾಲನೆ ‌ನೀಡಲಾಯಿತು.

ಅರ್ಚಕ ಯಲಗುರದಾಚಾರ್ಯ ಜೋಷಿ ಅವರು ಪೂಜೆ ಸಲ್ಲಿಸಿ ಮಾತನಾಡಿ, ಭಕ್ತರ ಸಹಕಾರದಿಂದ ದೇವಸ್ಥಾ‌‌ನದ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದ್ದು, ಶೀಘ್ರದಲ್ಲಿ ದೇವಸ್ಥಾನವು ಸುಸಜ್ಜಿತವಾಗಿ ‌ನಿರ್ಮಾಣವಾಗಲಿದೆ ಎಂದರು.

ವಾದಿರಾಜ, ಶ್ರೀನಿವಾಸಾಚಾರ್ ಜೋಷಿ, ನರಸಿಂಹಾಚಾರ್ ಜೋಷಿ, ಕುಪ್ಪಾಚಾರ್ ಜೋಷಿ, ವಸುಧೇಂದ್ರ, ಗೋಪಾಲಾಚಾರ್, ರಮೇಶ ದರ್ಶನಕರ್, ಕೃಷ್ಣಾಜಿರಾವ್ ಸೂರ್ಯವಂಶಿ, ಜಯರಾಮ ಶೆಟ್ಟಿ, ರಮೇಶ ಶೆಟ್ಟಿ, ಶೇಖರಯ್ಯ ಸ್ವಾಮಿ, ಅಯ್ಯಪ್ಪಗೌಡ ನಂದರೆಡ್ಡಿ, ವೆಂಕಟಸ್ವಾಮಿ ಪೂಜಾರಿ, ಅಮರೇಶ ಉಪ್ಪಾರ ಸೇರಿದಂತೆ ಭಕ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.