ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸನ್ಮಾರ್ಗ ಬೋಧಿಸಿದ ಮಹಾನ್‍ ಸಂತ’

Published 15 ಫೆಬ್ರುವರಿ 2024, 13:59 IST
Last Updated 15 ಫೆಬ್ರುವರಿ 2024, 13:59 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಸಮಾಜದಲ್ಲಿ ಅಜ್ಞಾನ, ಅಂಧಕಾರ ತೊಳೆಯುವ ಮೂಲಕ ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಸನ್ಮಾರ್ಗ ತತ್ವಾದರ್ಶಗಳನ್ನು ಕೊಡುಗೆಯಾಗಿ ನೀಡಿದ ಸಂತ ಸೇವಾಲಾರರು ಮಹಾನ್‍ ಕೊಡುಗೆ ನೀಡಿದ್ದಾರೆ’ ಎಂದು ತಹಶೀಲ್ದಾರ್ ಮಲ್ಲಪ್ಪ ಯರಗೋಳ ಹೇಳಿದರು.

ಗುರುವಾರ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ 284ನೇ ಜಯಂತಿಯಲ್ಲಿ ಮಾತನಾಡಿ, 'ಮನುಷ್ಯ ಜನ್ಮ ಪವಿತ್ರವಾದುದು. ಕೆಟ್ಟ ವ್ಯಸನಗಳಿಗೆ ಬಲಿಯಾಗಬೇಡಿ. ಶಿಕ್ಷಣ ಪಡೆದು ಗುಣವಂತರಾಗಿ ಅರಿಷಡ್‍ ವರ್ಗಗಳಿಂದ ಮುಕ್ತರಾಗಿ ಬದುಕು ಸಾರ್ಥಕಗೊಳಿಸಿಕೊಳ್ಳಲು ಸಲಹೆ ನೀಡದ್ದಾರೆ. ದೇಶದ ಸಂತ ಶ್ರೇಷ್ಠರಲ್ಲಿ ಸೇವಾಲಾಲ್‍ ಮಹಾರಾಜ ಕೂಡ ಸಾಂಸ್ಕೃತಿಕ ನಾಯಕರಾಗಿ ಗುರುತಿಸಿಕೊಂಡಿದ್ದಾರೆ’ ಎಂದರು.

ಬಂಜಾರ ಸಮಾಜದ ಮುಖಂಡರಾದ ಜೂವಲೆಪ್ಪ ನಾಯ್ಕ, ಲಾಲಪ್ಪ ರಾಠೋಡ, ನಾಗರೆಡ್ಡಿ ರಾಠೋಡ, ರಮೇಶ ನಾಯ್ಕ, ದೇವಪ್ಪ ನಾಯ್ಕ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT