ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ದೇವಸ್ಥಾನದ ಹುಂಡಿಯಲ್ಲಿದ್ದ ಹಣ ಕಳವು

Published 23 ಫೆಬ್ರುವರಿ 2024, 15:40 IST
Last Updated 23 ಫೆಬ್ರುವರಿ 2024, 15:40 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರಿನ ಎಲ್‌.ಬಿ.ಎಸ್‌ ನಗರ ವ್ಯಾಪ್ತಿಯ ಅಲ್ಲಮಪ್ರಭು ಕಾಲೊನಿಯ ತಾಯಮ್ಮ ದೇವಸ್ಥಾನದಲ್ಲಿ ಗುರುವಾರ ಸಂಜೆ ಹುಂಡಿಯಲ್ಲಿನ ಹಣ ಕಳವು ಮಾಡಲಾಗಿದೆ.

ಹುಂಡಿ ಒಡೆದ ಕಿಡಿಗೇಡಿಗಳು ಹುಂಡಿಯಲ್ಲಿನ ಹಣ ದೋಚಿ ಪರಾರಿಯಾಗಿದ್ದಾರೆ. ದೇವಸ್ಥಾನ ಸಮಿತಿಯಿಂದ‌ ಸ್ಥಳೀಯ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಲಾಗಿದೆ.

‘ಹುಂಡಿಯಲ್ಲಿ ಎಷ್ಟು ಮೊತ್ತದ ಹಣವಿತ್ತು ಎಂಬ ಅಂದಾಜಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT