ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ | ಇದು ಕಾಶ್ಮೀರಿ ಆ್ಯಪಲ್ ಅಲ್ಲ ಬಾರೇ ಹಣ್ಣು!

Published 17 ಡಿಸೆಂಬರ್ 2023, 5:45 IST
Last Updated 17 ಡಿಸೆಂಬರ್ 2023, 5:45 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದ ಬಿ.ಎ.ಕರೀಂಸಾಬ್ ತಮ್ಮ ಎಂಟು ಎಕರೆ ಜಮೀನಿನಲ್ಲಿ ಆಪಲ್, ಗ್ರೀನ್ ಆಪಲ್ (ಥಾಯ್ಲೆಂಡ್) ಮತ್ತು ಬಾಲಸುಂದರಿ ತಳಿಯ ಅಂದಾಜು 2 ಸಾವಿರ ಬಾರೇ ಹಣ್ಣಿನ ಸಸಿಗಳನ್ನು ನಾಲ್ಕು ವರ್ಷಗಳ ಹಿಂದೆ ನಾಟಿ ಮಾಡಿದ್ದಾರೆ. ಮೂರು ವರ್ಷಗಳಿಂದ ಫಸಲು ಆರಂಭವಾಗಿದೆ.

ಕೀಟಬಾಧೆ ನಿಯಂತ್ರಣಕ್ಕೆ ಬಾರದೆ ಮೊದಲ ವರ್ಷ ಸ್ವಲ್ಪ ನಷ್ಟ ಅನುಭವಿಸಿದರೂ ಸತತ ಎರಡು ವರ್ಷಗಳಿಂದ ಉತ್ತಮ ಲಾಭ ಪಡೆಯುತ್ತಿದ್ದಾರೆ. ಬಾರೇ ಹಣ್ಣಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವುದರಿಂದ ಲಾಭ ನಿರೀಕ್ಷೆ ಇದೆ.

‘ಆರಂಭದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಉತ್ತಮ ಫಸಲು ಬಂದಿದ್ದು ಅಧಿಕ ಲಾಭವಾಗುತ್ತಿದೆ. ಬಾರೇ ಲಾಭದಾಯಕ ಬೆಳೆ, ಈ ಭಾಗದಲ್ಲಿ ಇನ್ನೂ ಹೆಚ್ಚಿನ ರೈತರು ಬೆಳೆದರೆ ನೆರೆ ರಾಜ್ಯದ ಮಾರುಕಟ್ಟೆಗೆ ಸಾಗಿಸಿ ಅಧಿಕ ಲಾಭ ಪಡೆಯಬಹುದು.

₹80ಗೆ ಒಂದರಂತೆ ಸಸಿಗಳನ್ನು ಕೋಲ್ಕತ್ತದಿಂದ ತಂದಿದ್ದು ಒಂದು ವರ್ಷದಲ್ಲಿ ಫಲ ನೀಡಲು ಆರಂಭವಾಗಿದೆ. ಸತತ ಮೂರು ತಿಂಗಳು ಹಣ್ಣುಗಳು ಸಿಗುತ್ತವೆ. ಸದ್ಯ 600 ಗಿಡಗಳಿದ್ದು ಒಂದೂವರೆ ತಿಂಗಳಿಂದ ಕಟಾವು ನಡೆಯುತ್ತಿದೆ. ಕ್ವಿಂಟಲ್‌ಗೆ ₹25 ಸಾವಿರದಂತೆ ಮಾರಾಟ ಮಾಡುತ್ತಿದ್ದು ಇನ್ನೂ 600 ಟನ್ ಇಳುವರಿಯ ನಿರೀಕ್ಷೆ ಇದೆ.

ಗ್ರೀನ್ ಆಪಲ್ (ಥಾಯ್ಲೆಂಡ್) ತಳಿಯ ಬಾರೇ ಗಾತ್ರದಲ್ಲಿ ದೊಡ್ಡದು, ದುಂಡನೆ ಆಕಾರ, ರುಚಿ ಸಪ್ಪೆ ಹೀಗಾಗಿ ಬೇಡಿಕೆ ಕಡಿಮೆ. ಕಾಶ್ಮೀರಿ ಆಪಲ್ ಗಾತ್ರದಲ್ಲಿ ಚಿಕ್ಕದು, ಮೊನಚು ತುದಿ, ಹೆಚ್ಚಿನ ಸಿಹಿ ಹೊಂದಿದೆ, ಬಾಲಸುಂದರಿ ತಳಿ ದುಂಡಗೆ, ದಪ್ಪಗೆ ಮತ್ತು ಸಿಹಿಯೂ ಅದ್ಬುತ ಹೀಗಾಗಿ ಅವುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ.

10 ಜನ ಮಹಿಳಾ ಕೂಲಿಕಾರರು ನಿತ್ಯ ಹಣ್ಣುಗಳನ್ನು ಕೀಳುತ್ತಾರೆ ಖರೀದಿದಾರರು ಹೊಲಕ್ಕೆ ಬಂದು ಖರೀದಿಸುತ್ತಾರೆ,

‘ಮುಂಬಯಿ, ಪುನಾ ಸೇರಿದಂತೆ ಹೊರ ರಾಜ್ಯದಲ್ಲಿ ಬೇಡಿಕೆ ಹೆಚ್ಚಿದೆ ಅಲ್ಲಿಗೆ ಪೂರೈಸುವಷ್ಟು ಹಣ್ಣು ಲಭ್ಯವಿಲ್ಲ ಸಾಗಾಣಿಕೆ ಖರ್ಚು ಬರುತ್ತದೆ. ಇನ್ನೂ ಹೆಚ್ಚಿನ ರೈತರು ಬಾರೆ ಬೆಳೆದರೆ ಒಟ್ಟಾಗಿ ಅದನ್ನು ದೂರದ ಮಾರುಕಟ್ಟೆಗೆ ಸಾಗಿಸಬಹುದು ಅದು ಇನ್ನೂ ಹೆಚ್ಚಿನ ಲಾಭ ನೀಡುತ್ತದೆ’ ಎಂದು ಅವರು ಹೇಳಿದರು.

ಕವಿತಾಳದ ಕರೀಂಸಾಬ್ ಅವರು ವಿವಿಧ ತಳಿಯ ಬಾರೆ ಹಣ್ಣು ಬೆಳೆದಿರುವುದು.
ಕವಿತಾಳದ ಕರೀಂಸಾಬ್ ಅವರು ವಿವಿಧ ತಳಿಯ ಬಾರೆ ಹಣ್ಣು ಬೆಳೆದಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT