ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿಚಿನ್ನದಗಣಿ | ಸೇವಾ ಬಡ್ತಿಯ ಮುನಿಸು: ಚಿನ್ನ ಉತ್ಪಾದನೆಗೆ ಅಡ್ಡಿ

ನಿತ್ಯ ಸಾವಿರ ಕಾರ್ಮಿಕರು ಕೆಲಸಕ್ಕೆ ಗೈರು
Published 26 ಅಕ್ಟೋಬರ್ 2023, 5:40 IST
Last Updated 26 ಅಕ್ಟೋಬರ್ 2023, 5:40 IST
ಅಕ್ಷರ ಗಾತ್ರ

ಹಟ್ಟಿಚಿನ್ನದಗಣಿ: ಚಿನ್ನದ ಗಣಿ ಕಂಪನಿಯಲ್ಲಿ ನಿತ್ಯ ಸಾವಿರ ಕಾರ್ಮಿಕರು ಕೆಲಸಕ್ಕೆ ಗೈರಾಗುತ್ತಿದ್ದು, ಇದು ಚಿನ್ನದ ಉತ್ಪಾದನೆಗೆ ಅಡ್ಡಿ ಮಾಡಿದೆಯಲ್ಲದೇ ಗಣಿಗಾರಿಗೆ ವಿಸ್ತರಣೆಗೂ ಹಿನ್ನಡೆಯಾಗಿದೆ.

ಕಾರ್ಮಿಕರ ಗೈರಿಗೆ ಅನಾರೋಗ್ಯ, ಸುರಕ್ಷತಾ ಉಪಕರಣಗಳ ಕೊರತೆ ಹಾಗೂ ಸೇವಾ ಬಡ್ತಿ ನೀಡದಿರುವುದು ಮುಖ್ಯ ಕಾರಣ ಎಂಬ ಆರೋಪ ಕೇಳಿಬಂದಿದೆ.

ಗಣಿ ಕಂಪನಿಯ ನಿರ್ದೇಶಕರ ಮಂಡಳಿ ನೀಡಿದ ವಾರ್ಷಿಕ ಚಿನ್ನ ಉತ್ಪಾದನೆ ಗುರಿ ತಲುಪಬೇಕು. ಶೇಕಡಾ ನೂರರಷ್ಟಲ್ಲದಿದ್ದರೂ, ಶೇ 80ರಷ್ಟಾದರೂ ಉತ್ಪಾದನೆಯಲ್ಲಿ ಗುರಿ ಮುಟ್ಟಬೇಕು. ಗುರಿ ತಲುಪಲು ಅಧಿಕಾರಿಗಳ ಮೇಲೆ ಒತ್ತಡದ ಹಾಕಲಾಗುತ್ತದೆ. ಈ ನಡುವೆಯೂ ಕಾರ್ಮಿಕರು ಗೈರಾಗುತ್ತಿರುವುದು ಆಡಳಿತ ಮಂಡಳಿಗೆ ತಲೆ ಬಿಸಿ ಮಾಡಿದೆ.

ಮಲ್ಲಪ್ಪ ಶಾಫ್ಟ್-470, ಸೆಂಟ್ರಲ್ ಶಾಫ್ಟ್-190, ವಿಲೇಜ್ ಶಾಫ್ಟ್-61, ತಾಂತ್ರಿಕ ವಿಭಾಗ-131, ಲೋಹ ವಿಭಾಗ-77, ಊಟಿ ಹಾಗೂ ಹೀರಾ ಬುದ್ದಿನ್ನಿ ಗಣಿಗಳಲ್ಲಿ-97, ಉಳಿದಂತೆ ಅಡ್ಮಿನ್, ಆಸ್ಪತ್ರೆ, ಕ್ಯಾಂಟೀನ್, ಭದ್ರತಾ ವಿಭಾಗ ಸೇರಿದಂತೆ ಒಟ್ಟು 1,054 ಕಾರ್ಮಿಕರು ಕೆಲಸಕ್ಕೆ ಗೈರಾಗುತ್ತಿದ್ದಾರೆ ಎಂದು ಗಣಿ ಕಂಪನಿಯ ಅಧಿಕಾರಿ ಹೇಳುತ್ತಾರೆ.

ಕಾರ್ಮಿಕರು ಗೈರಾಗುತ್ತಿರುವ ಪರಿಣಾಮ ನಾಲ್ಕು ಅಧಿಕಾರಿ ಒಳಗೊಂಡ ತಂಡವು ಸಿಬ್ಬಂದಿ ಹಾಗೂ ಕಾರ್ಮಿಕರ ಮನೆಗಳಿಗೆ ತೆರಳಿ ಸಮಾಲೋಚನೆ ಮಾಡಿ ಕರ್ತವ್ಯಕ್ಕೆ ಹಾಜರಾಗುವಂತೆ ಮನವೊಲಿಸಲು ಯತ್ನಿಸಿದೆ. ಆದರೂ ಪರಿಹಾರ ಕಾಣುತ್ತಿಲ್ಲ. ಅನುಕಂಪದ ಆಧಾರದ ಮೇಲೆ ಹಾಗೂ ಭೂಮಿ ಕಳೆದುಕೊಂಡ ಸಂತ್ರಸ್ತರ ಕುಟುಂಬದ ಮಹಿಳಾ ಕಾರ್ಮಿಕರನ್ನು ಉತ್ಪಾದನಾ ಕ್ಷೇತ್ರದಲ್ಲಿ ಬಳಸಿಕೊಳ್ಳಲು ಆಗುತ್ತಿಲ್ಲ.

ಗೈರಾಗುತ್ತಿರುವ ಕಾರ್ಮಿಕರಿಗೆ ಕೌನ್ಸೆಲಿಂಗ್ ಮಾಡಲಾಗಿದೆ. ನೋಟಿಸ್ ನೀಡಿ ಎಚ್ಚರಿಕೆ ನೀಡಿದರೂ ಕೆಲಸಕ್ಕೆ ಬರುತ್ತಿಲ್ಲ. ಎಚ್ಚರಿಕೆ ನೀಡಿದರೂ ಕೇಳದವರ ವಿರುದ್ದ ಕಠಿಣ ಕ್ರಮಕೈಗೊಳ್ಳಲು ಆಡಳಿತ ಮಂಡಳಿ ತೀರ್ಮಾನಿಸಿದೆ.
ಹನುಮಂತಪ್ಪ ನೀರಮಾನ್ವಿ ಪ್ರಧಾನ ವ್ಯವಸ್ಥಾಪಕ (ಸಮನ್ವಯ) ಹಟ್ಟಿಚಿನ್ನದ ಗಣಿ ಕಂಪನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT