ಸಿಂಧನೂರು (ರಾಯಚೂರು ಜಿಲ್ಲೆ): ನಗರದ ಪಿಡಬ್ಲ್ಯುಡಿ ಕ್ಯಾಂಪಿನ ಡಾಲರ್ಸ್ ಕಾಲೊನಿ ಬಳಿ ಸೋಮವಾರ ರಾತ್ರಿ ತೌಡು ತುಂಬಿದ ಲಾರಿ ಪಲ್ಟಿಯಾಗಿ ನೀರಾವರಿ ಇಲಾಖೆಯ ಮೂವರು ನೌಕರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನೀರಾವರಿ ಇಲಾಖೆಯ ಕಿರಿಯ ಎಂಜಿನಿಯರ್ಗಳಾದ ಲಿಂಗಸುಗೂರು ತಾಲ್ಲೂಕಿನ ಮಲ್ಲಿಕಾರ್ಜುನ ಸರ್ಜಾಪುರ (29), ಶಿವರಾಜಕುಮಾರ ಕುರಿರಾಂಪುರ (30) ಹಾಗೂ ಕಂಪ್ಯೂಟರ್ ಆಪರೇಟರ್ ಪಿಡ್ಬ್ಲೂಡಿ ಕ್ಯಾಂಪ್ ನಿವಾಸಿ ಮೆಹಬೂಬ (32) ಮೃತರು.

ಜವಾಳಗೇರದಲ್ಲಿ ಕೆಲಸ ಮುಗಿಸಿಕೊಂಡು ಬರುವಾಗ ಸಿಂಧನೂರಿನ ಡಾಲರ್ಸ್ ಕಾಲೊನಿ ಬಳಿ ಬೈಕ್ ನಿಲ್ಲಿಸಿ ಮಾತನಾಡುತ್ತಿದ್ದರು. ಇದೇ ವೇಳೆ ರಾಯಚೂರು ಕಡೆಯಿಂದ ವೇಗವಾಗಿ ಬಂದ ತೌಡು ತುಂಬಿದ ಲಾರಿ ಏಕಾಏಕಿ ಪಲ್ಟಿಯಾಗಿ ಮೂವರ ಮೇಲೆ ಬಿದ್ದಿದೆ.

ಲಾರಿ ಚಾಲಕ ಬಾಷಾ, ಕ್ಲೀನರ್ ಮೆಹಬೂಬ್ ಅವರಿಗೂ ಗಂಭೀರ ಗಾಯಗಳಾಗಿವೆ. ತಾಲ್ಲೂಕು ಆಸ್ಪತ್ರೆಯಲ್ಲಿ ಇವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೆಕ್ಕ ಸಹಾಯಕ ನಿಧನ

ಜವಳಗೇರಾ ಉಪವಿಭಾಗದ ಇಬ್ಬರು ಕಿರಿಯ ಎಂಜನಿಯರ್ಗಳಾದ ಮಲ್ಲಿಕಾರ್ಜುನ, ಶಿವರಾಜಕುಮಾರ ಕುರಿ, ಕಂಪ್ಯೂಟರ್ ಆಪರೇಟರ್ ಮಹೆಬೂಬ್ಸಾಬ್ ರಸ್ತೆ ಅಪಘಾತದಲ್ಲಿ ಮೃತಪಟ್ಟರೆ, ಸ್ಥಳೀಯ ನೀರಾವರಿ ವಿಭಾಗೀಯ ಕಚೇರಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮೈಮೂದ್ (53) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇವರು ಕರ್ತವ್ಯ ನಿರ್ವಹಣೆಯ ಮೇರೆಗೆ ಮಾನವ ಸಂಪನ್ಮೂಲ ಸರಬರಾಜು ಕಾಮಗಾರಿಗಳ ಕುರಿತು ಧಾರವಾಡದ ಮೇಲಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಲು ತೆರಳಿದ್ದರು. ಈ ವೇಳೆ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋಗಲು ಟಿಕೆಟ್ ತೆಗೆಸುವ ಸಮಯದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮಂಗಳವಾರ ಮೃತರ ಕಳೆಬರವನ್ನು ತಂದು ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಇದ್ದೊಬ್ಬ ಮಗ ಹೋದ ಮೇಲೆ ನಾನೇಕೆ ಬದುಕಲಿ: ‘ದೇವರು ಇದ್ದೊಬ್ಬ ಮಗನನ್ನೇ ಕಸಿದುಕೊಂಡು ಬಿಟ್ಟ, ನಾನೇಕೆ ಬದುಕಲಿ, ನನ್ನನ್ನು ಮೇಲೆ ಕರ್ಕೊಂಡು ಬಿಡಪ್ಪ ದೇವರೆ’ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮೃತ ಕಂಪ್ಯೂಟರ್ ಆಪರೇಟರ್ ಮಹೆಬೂಬ್ಸಾಬ ಅವರ ತಂದೆ ಲಾಲ್ಸಾಬ್ ರೋಧನೆ ನೆರೆದಿದ್ದ ಜನರನ್ನು ದುಃಖದ ಮಡುವಿನಲ್ಲಿ ಮುಳುಗಿಸಿತು.

‘ತಾನೇ ದುಡಿದು ಐದು ಮಂದಿ ಅಕ್ಕ-ತಂಗಿಯರ ಮದುವೆ ಮಾಡಿದ. ಒಂದು ದಿನನೂ ಜಗಳ ಆಡಲಿಲ್ಲ, ನಿತ್ಯ ನಮ್ಮ ಸುಖ-ದುಃಖ ಕೇಳುತ್ತಿದ್ದ. ಆರಾಮಿಲ್ಲಂದ್ರೆ ಡಾಕ್ಟರ್ ಹತ್ರ ಕರ್ಕೊಂಡು ಹೋಗುತ್ತಿದ್ದ. ಈಗ ಮಗ ಹೋದ ಮೇಲೆ ನಮ್ಗ್ಯಾರು ದಿಕ್ಕು, ನಾವ್ಹೇಗೆ ಬದುಕಬೇಕು, ನಮ್ಮನ್ನು ಯಾರು ಸಾಕುತ್ತಾರೆ’ ಎಂದು ಕಣ್ಣೀರು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.