ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿಯ ತಿಡಿಗೋಳದಲ್ಲಿ 27 ವರ್ಷಗಳ ಬಳಿಕ ಚುನಾವಣೆ

Last Updated 20 ಡಿಸೆಂಬರ್ 2020, 11:15 IST
ಅಕ್ಷರ ಗಾತ್ರ

ಮಸ್ಕಿ: ತಿಡಿಗೋಳ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ 27 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಹಿಂದೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು.

1993 ರಲ್ಲಿ ಈ ಗ್ರಾಮ ಪಂಚಾಯಿತಿ ಅಸ್ತಿತ್ವಕ್ಕೆ ಬಂದಿದೆ. ಗ್ರಾಮದ ಮುಖಂಡ ದಿ.ಮಹಾಂತಗೌಡ ಹಾಗೂ ಈಶಪ್ಪ ಸಾಹುಕಾರ ನೇತೃತ್ವದಲ್ಲಿ ಪಂಚಾಯಿತಿ ವ್ಯಾಪ್ತಿಯ ಮುಖಂಡರು ಒಂದು ಕಡೆ ಸೇರಿ ಎಲ್ಲ 25 ಸ್ಥಾನಗಳಿಗೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಿದ್ದರು.

ಪಂಚಾಯಿತಿಯ 25 ಸ್ಥಾನಗಳ ಪೈಕಿ ಕುರುಕುಂದಾ 3 ಹಾಗೂ ಉಪ್ಪಲದೊಡ್ಡಿಯ 5 ಸ್ಥಾನಗಳಿಗೆ ಮಾತ್ರ ಅವಿರೋಧ ಆಯ್ಕೆ ನಡೆದಿದೆ. ಉಳಿದ 17 ಸ್ಥಾನಗಳಿಗೆ ಮೊದಲ ಬಾರಿಗೆ ಚುನಾವಣೆ ನಡೆಯಲಿದೆ. ಒಟ್ಟು 53 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

‘ನಾಯಕತ್ವದ ಕೊರತೆ ಕಾರಣ ಇದೇ ಮೊದಲ ಬಾರಿ ತಿಡಿಗೋಳ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆಯುತ್ತಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT