ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಮೇಲ್ಸೇತುವೆ: 17ರ ವರೆಗೆ ಸಂಚಾರಕ್ಕೆ ಅವಕಾಶ

Published 11 ಜನವರಿ 2024, 15:48 IST
Last Updated 11 ಜನವರಿ 2024, 15:48 IST
ಅಕ್ಷರ ಗಾತ್ರ

ರಾಯಚೂರು: ತಾಲ್ಲೂಕಿನ ದೇವಸೂಗೂರು ಬಳಿಯ ಹೈದರಾಬಾದ್ ರಸ್ತೆಯ ಕೃಷ್ಣ ನದಿ ಮೇಲ್ಸೇತುವೆ  ಮೇಲೆ ಜ.12ರಿಂದ ವಾಹನ ಸಂಚಾರ ನಿಷೇಧ ಮಾಡಿದ್ದನ್ನು ರದ್ದುಗೊಳಿಸಿ 17ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ಸಂಕ್ರಾಂತಿ ಹಬ್ಬ ಮತ್ತು ಯಾದಗಿರಿಯ ಮೈಲಾಪೂರು ಜಾತ್ರೆಯ ಹಿನ್ನಲೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರ ಜೊತೆ ಚರ್ಚೆಸಲಾಗಿದೆ ಎಂದು ಶಾಸಕ ಡಾ.ಶಿವರಾಜ ಪಾಟೀಲ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಕಳೆದ ಒಂದು ವಾರದ ಹಿಂದೆ ಕೃಷ್ಣನದಿ ಸೇತುವೆ ದುರಸ್ತಿ ಕಾಮಗಾರಿ ಕೈಗೊಳ್ಳಲು ಇದೇ ಜ.10ರಿಂದ ರಸ್ತೆ ಸಂಚಾರ ಬಂದ್ ಮಾಡಲು ಸಭೆ ಮಾಡಿ ತಿಳಿಸಲಾಗಿತ್ತು. ಕೃಷ್ಣ ನದಿ ಸೇತುವೆಯಿಂದ ಸಂಚಾರ ಬಂದ್ ಮಾಡಿದ ಕಾರಣ ಹೈದರಾಬಾದ್ ಗೆ ತೆರಳುವ ಬಸ್ ಗದ್ವಾಲ್– ಪಬ್ಬೇರ್ ಕೊತ್ತಕೋಟ ಮಾರ್ಗವಾಗಿ 38 ಕಿ. ಮೀ ಸುತ್ತುವರೆದು ಪ್ರಯಾಣ ಮಾಡಿದರೆ ರಾಯಚೂರಿನಿಂದ ಯಾದಗಿರಿ– ಕಲಬುರಗಿಗೆ ತೆರಳಲು ದೇವದುರ್ಗ, ಹೂವಿನಹಡಗಿ ಸೇತುವೆ ಮೂಲಕ ಪ್ರಯಾಣ ಬೆಳೆಸಬೇಕಿದೆ. 

ಸಂಕ್ರಾಂತಿಯ ಸಂದರ್ಭದಲ್ಲಿ ಕೃಷ್ಣನದಿಯಲ್ಲಿ ಸ್ನಾನ ಮಾಡುವ ಕಾರಣ ಜ.17ರ ವರೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT