ಬುಧವಾರ, ಆಗಸ್ಟ್ 17, 2022
29 °C
ಸಾರಿಗೆ ಇಲಾಖೆ ನೌಕರರಿಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ಗೆ ಮನವಿ

ಸರ್ಕಾರಿ ನೌಕರರೆಂದು ಘೋಷಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈಶಾನ್ಯ ಸಾರಿಗೆ ಸಂಸ್ಥೆಯ ಲಿಂಗಸುಗೂರು ಘಟಕದ ನೌಕರರು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್‍ ಕುಮಾರ್ ಕಟೀಲ್‌ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಪಟ್ಟಣಕ್ಕೆ ಭೇಟಿ ನೀಡಿದ್ದ ಅವರಿಗೆ ಮನವಿ ಸಲ್ಲಿಸಿದ ನೌಕರರು,‘ಶಾಂತಿಯುತ ಹೋರಾಟ ನಡೆಸುತ್ತಿದ್ದ ಕಾರ್ಮಿಕ ಮುಖಂಡರನ್ನು ಬಂಧಿಸುವ ಮೂಲಕ ಕಾರ್ಮಿಕರ ಮೇಲೆ ಸರ್ಕಾರ ದೌರ್ಜನ್ಯ ನಡೆಸಿದೆ. ಬೇಡಿಕೆಗಳನ್ನು ಕೂಲಂಕಷವಾಗಿ ಆಲಿಸುವ ಮೂಲಕ ಮನವೊಲಿಸುವ ಯತ್ನ ನಡೆಸದಿರುವುದು ಅಮಾನವೀಯ ಘಟನೆ’ ಎಂದರು.

ಲಾಕ್‍ಡೌನ್‍ ಸಂದರ್ಭದಲ್ಲಿ ಜೀವದ ಹಂಗು ತೊರೆದು ರಾಜ್ಯ ಹೊರ ರಾಜ್ಯಗಳಿಂದ ಕೂಲಿಕಾರರನ್ನು, ಪ್ರಯಾಣಿಕರನ್ನು ಅಹೋ ರಾತ್ರಿ ಕರೆ ತಂದಿದ್ದೇವೆ. ಈ ಸಂದರ್ಭದಲ್ಲಿ ಕೆಲವರು ಕೋವಿಡ್‍ ಸೋಂಕಿನಿಂದ ಮೃತಪಟ್ಟಿದ್ದಾರೆ. ಅಂತಹ ಕುಟುಂಬಸ್ಥರಿಗೆ ಅಗತ್ಯ ಪರಿಹಾರ ಘೋಷಿಸಬೇಕು. ಉಚಿತ ವೇತನ ನೀಡುವ ಭರವಸೆ ಹುಸಿಯಾಗಿದೆ ಎಂದು ಆರೋಪಿಸಿದರು.

ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು. ಇತರೆ ಇಲಾಖೆ ನೌಕರರಿಗೆ ನೀಡುವ ಎಲ್ಲ ಸೌಲಭ್ಯಗಳು ನಮಗೂ ವಿಸ್ತರಣೆ ಮಾಡಬೇಕು. ಸೇವಾ ಭದ್ರತೆ, ನಿಗದಿತ ಅವಧಿಯಲ್ಲಿ ವೇತನ. ಕೋವಿಡ್‍ ಸೋಂಕಿನಿಂದ ಮೃತರಾದ ಕುಟುಂಬಕ್ಕೆ ಸೂಕ್ತ ಪರಿಹಾರ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದರು.

ಮುಖಂಡರಾದ ದ್ಯಾಮಣ್ಣ, ಉಮೇಶ, ಸಿದ್ರಾಮಪ್ಪ, ಗುಂಡಪ್ಪ, ಗಂಗಾಧರ ನಾಯಕ, ಎಂ.ಎ ಖಾಲೀದ, ಉಸ್ಮಾನ್‍ಪಾಷ, ಶರಣಪ್ಪ, ಅಮರೇಶ, ದುರುಗಪ್ಪ, ಶಿವಾನಂದ, ರವೀಂದ್ರ ಪಾಟೀಲ್, ಆದಪ್ಪ ಈಚನಾಳ, ಯಮನಪ್ಪ, ಶ್ರೀಕಾಂತ, ಪವಾಡೆಪ್ಪ, ಶಿವಾನಂದ, ನಾಡಗೌಡ್ರ, ಪರಶುರಾಮ ಹಾಗೂ ಈರಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.