ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಪುಷ್ಕರ ಮೇಳ ಇಂದಿನಿಂದ

Last Updated 19 ನವೆಂಬರ್ 2020, 20:52 IST
ಅಕ್ಷರ ಗಾತ್ರ

ರಾಯಚೂರು: ತುಂಗಭದ್ರಾ ನದಿ ಪುಣ್ಯಸ್ನಾನ ಪುಷ್ಕರ ಮೇಳ ಶುಕ್ರವಾರದಿಂದ (ನ.20) ಆರಂಭವಾಗಲಿದೆ.

ಡಿಸೆಂಬರ್‌ 1ರವರೆಗೂ ಪುಷ್ಕರ ಮೇಳ ನಡೆಯಲಿದ್ದು, ದೇಶದ ವಿವಿಧೆಡೆಯಿಂದ ಜನರು ನದಿಸ್ನಾನಕ್ಕಾಗಿ ಬರುವರು. ಆಂಧ್ರಪ್ರದೇಶ ಕರ್ನೂಲ್‌ ಜಿಲ್ಲೆಯ ಮಂತ್ರಾಲಯ, ರಾಯಚೂರು ಜಿಲ್ಲೆಯ ಚೀಕಲಪರ್ವಿ, ಬಿಚ್ಚಾಲಿ ಮತ್ತು ಧಡೇಸೂಗೂರು ಬಳಿ ನದಿಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕೋವಿಡ್‌–19 ಮುನ್ನಚ್ಚೆರಿಕೆ ನಿಯಮಗಳ ಪಾಲನೆಗೆ ಕರ್ನೂಲ್ ಮತ್ತು ರಾಯಚೂರು ಜಿಲ್ಲಾಡಳಿತ ಸೂಚಿಸಿವೆ. ಜನದಟ್ಟಣೆ ನಿರ್ವಹಣೆಗೆ ಮಂತ್ರಾಲಯದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ನದಿ ಪಕ್ಕದಲ್ಲಿ ಭಕ್ತರ ಅನುಕೂಲಕ್ಕೆ ನೂತನವಾಗಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಸ್ನಾನಕ್ಕೆ ನದಿ ನೀರು ಲಭ್ಯವಾಗುವಂತೆ ಮಾಡಲಾಗಿದೆ.

ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶುಕ್ರವಾರ ಬೆಳಿಗ್ಗೆ 7ಕ್ಕೆ ನದಿಯಲ್ಲಿ ವಿಶೇಷ ಪೂಜೆ ನೆರವೇರಿಸಿ ಸ್ನಾನಕ್ಕೆ ಚಾಲನೆ ನೀಡುವರು. ಇದಕ್ಕೂ ಮುನ್ನ ಮಠದಿಂದ ನದಿವರೆಗೂ ಸುವರ್ಣ ಮತ್ತು ರಜತ ಕಳಸಗಳ ಮೆರವಣಿಗೆ ಉತ್ಸವ ನಡೆಯಲಿದೆ. ನದಿಯಲ್ಲಿ ಕಳಸೋದಕ ನೆರವೇರಿಸಿ, ಪುಷ್ಪಾರ್ಚನೆ ಮಾಡಿದ ನಂತರ ವಿವಿಧ ರೀತಿಯ ದಾನಗಳನ್ನು ಶ್ರೀಗಳು ಮಾಡುವರು. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT