ಸಿಂಧನೂರು: ತಾಲ್ಲೂಕಿನ ಕುಗ್ರಾಮ ಸಿಂಗಾಪುರ ಮತ್ತು ಬಳ್ಳಾರಿ ಜಿಲ್ಲೆಯ ಗಡಿಭಾಗ ನಿಟ್ಟೂರು ಗ್ರಾಮಗಳ ನಡುವೆ ಹರಿಯುವ ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸುವ ಭರವಸೆಗಳಿಂದ ಹಲವಾರು ಚುನಾವಣೆಗಳು ಮುಗಿದಿವೆ. ಸೇತುವೆ ಕಟ್ಟುವ ಕೆಲಸ ಮಾತ್ರ ಆರಂಭಗೊಳ್ಳದಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಸಂಪರ್ಕ ಸಾಧಿಸುವ ಈ ಸೇತುವೆ ನಿರ್ಮಾಣ ಯೋಜನೆ ಅತ್ಯಂತ ಮಹತ್ವದಾಗಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಕರಡಿ ಸಂಗಣ್ಣ ಎರಡು ಬಾರಿ, ಸಿಂಧನೂರು ವಿಧಾನಸಭಾ ಕ್ಷೇತ್ರದಿಂದ ಹಂಪನಗೌಡ ಬಾದರ್ಲಿ ಮೂರು ಬಾರಿ, ವೆಂಕಟರಾವ್ ನಾಡಗೌಡ ಎರಡು ಬಾರಿ, ಸಿರುಗುಪ್ಪಾ ಶಾಸಕ ಎಂ.ನಾಗರಾಜ ಅವರು ಈ ಸೇತುವೆ ನಿರ್ಮಿಸುವ ಭರವಸೆ ನೀಡಿ ಗೆಲ್ಲುತ್ತಾ ಬಂದಿದ್ದಾರೆ.

ಕರಡಿ ಸಂಗಣ್ಣ ಅವರು 2014 ರಿಂದ 24ರವರೆಗೆ ಎರಡು ಅವಧಿಗೆ ಸಂಸದರಾಗಿದ್ದರು. 2018ರಲ್ಲಿ ಸಿಆರ್ಎಫ್ ನಿಧಿಯಲ್ಲಿ ಸೇತುವೆ ನಿರ್ಮಾಣದ ಯೋಜನೆಗೆ ₹80 ಕೋಟಿ ಮಂಜೂರು ಮಾಡಿಸಿರುವುದಾಗಿ ಹೇಳಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆ ವೇಳೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಮಾಡುತ್ತದೆ ಎಂದು ಕೈತೊಳೆದುಕೊಂಡರು.

ತದನಂತರ ಶಾಸಕರಾಗಿದ್ದ ವೆಂಕಟರಾವ್ ನಾಡಗೌಡ, ಹಾಲಿ ಶಾಸಕರಾಗಿರುವ ಹಂಪನಗೌಡರೂ ಇತ್ತ ಕಡೆ ಮುಖ ಮಾಡಿಯೇ ಇಲ್ಲ. ಅಲ್ಲದೇ ಪ್ರಸ್ತುತ ಕೊಪ್ಪಳ ಲೋಕಸಭಾ ಸದಸ್ಯರಾಗಿರುವ ರಾಜಶೇಖರ ಹಿಟ್ನಾಳ್ ಅಂತೂ ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಆದ್ದರಿಂದ ಮುಂಬರುವ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಬೇಕು ಎಂದು ತಾಲ್ಲೂಕಿನ ಮುಕ್ಕುಂದಾ, ಚನ್ನಳ್ಳಿ, ಸೋಮಲಾಪುರ ಹಾಗೂ ಕೊಪ್ಪಳ ಜಿಲ್ಲೆಯ ಬೂದಗುಂಪಾ ಮತ್ತು ಬೆನ್ನೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ನಿರ್ಧಾರ ಕೈಗೊಂಡಿರುವುದಾಗಿ ಸಮಾಜ ಸೇವಕ ಬಿ.ಶಾಂತಪ್ಪ ಸಿಂಗಾಪು ಅವರು ಹೇಳುತ್ತಾರೆ.

‘ಕಳೆದ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ ಕೈಗೊಳ್ಳಲಾಗಿತ್ತು. ಅಧಿಕಾರಿಗಳು ಬಂದು ಸಮಸ್ಯೆಯ ಗಂಭೀರತೆಯ ಬಗ್ಗೆ ಮನವರಿಕೆ ಮಾಡುವುದಾಗಿ ಹೇಳಿ ಗ್ರಾಮಸ್ಥರಿಗೆ ಹೇಳಿದ್ದರು. ಆದರೆ ಈ ಬಾರಿ ಯಾರು ಬಂದರೂ ನಮ್ಮ ನಿರ್ಧಾರ ಬದಲಿಸುವುದಿಲ್ಲ. ಮತದಾನವನ್ನು ಬಹಿಷ್ಕರಿಸುವುದು ಸತಸಿದ್ಧ’ ಎಂದು ಚಂದ್ರಯ್ಯಸ್ವಾಮಿ ಸಿಂಗಾಪುರ ಮತ್ತು ಶ್ರೀಕಾಂತ ಕುಲಕರ್ಣಿ ಸಿಂಗಾಪುರ ಎಚ್ಚರಿಕೆ ನೀಡಿದ್ದಾರೆ.

‘ಕೇಂದ್ರ ಸರ್ಕಾರ ಮಂಜೂರು ಮಾಡಿದ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಮಾಡಿಕೊಳ್ಳದೇ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ. ಸಿಂಧನೂರು ತಾಲ್ಲೂಕಿನ ಸಿಂಗಾಪುರ ಮತ್ತು ಸಿರುಗುಪ್ಪಾ ತಾಲ್ಲೂಕಿನ ನಿಟ್ಟೂರು ನಡುವೆ ಹರಿಯುವ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣಗೊಂಡರೆ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾ ಕೇಂದ್ರಗಳಿಗೆ ತೆರಳಲು 100 ಕೀ.ಮಿ ಸವೆಸಬೇಕಾಗುತ್ತದೆ. ಜೊತೆಗೆ ವ್ಯವಹಾರ, ಶಿಕ್ಷಣ ಮತ್ತು ಆಸ್ಪತ್ರೆಗಳಿಗೆ ತೆರಳಲು ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಹಲವಾರು ಗಡಿ ಗ್ರಾಮಗಳಿಗೆ ಎಲ್ಲಾ ವಿದಧಲ್ಲಿ ಅನುಕೂಲವಾಗಲಿದೆ’ ಎಂದು ಮುಕ್ಕುಂದಾ, ಸಿಂಗಾಪುರ, ನಿಟ್ಟೂರು ಮತ್ತಿತರ ಗ್ರಾಮಸ್ಥರು ಹೇಳುತ್ತಿದ್ದಾರೆ.

ಎಲ್ಲ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸಿಂಗಾಪೂರ ಮತ್ತು ನಿಟ್ಟೂರು ಸೇತುವೆ ಯೋಜನೆಗೆ ಹಿನ್ನಡೆಯಾಗಿದೆ
ಶಿವಶಂಕರಗೌಡ ಪೊಲೀಸ್ ಪಾಟೀಲ ಸಿಂಗಾಪೂರ

₹80 ಕೋಟಿ ಯೋಜನೆ ಸಾಕಾರಗೊಳಿಸಲು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಸಿರುಗುಪ್ಪ ಮತ್ತು ಸಿಂಧನೂರು ಶಾಸಕರು ಮುತುವರ್ಜಿ ವಹಿಸಬೇಕು
ರಾಘವೇಂದ್ರ ಶೆಟ್ಟಿ ಮುಕ್ಕುಂದಾ ಸದಸ್ಯ ಅಂಬಾದೇವಿ ದೇವಸ್ಥಾನ ಸಮಿತಿ

ಜನಪ್ರತಿನಿಧಿಗಳು ಗ್ರಾಮಸ್ಥರ ಸಹನೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಭರವಸೆ ನೀಡಿ ನಂತರ ಕಿಂಚಿತ್ತೂ ಕಾಳಜಿ ವಹಿಸದೆ ಮೋಸ ಮಾಡಿದ್ದಾರೆ
ಶಿವರಾಜ ಅಧ್ಯಕ್ಷ ರೈತ ಸಂಘ ಸಿಂಧನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.