ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು | ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಯುವಕರ ಸಾವು

Published 1 ಮೇ 2024, 8:28 IST
Last Updated 1 ಮೇ 2024, 8:28 IST
ಅಕ್ಷರ ಗಾತ್ರ

ಲಿಂಗಸುಗೂರು(ರಾಯಚೂರು ಜಿಲ್ಲೆ): ತಾಲ್ಲೂಕಿನ ಜಾವೂರ ಕ್ರಾಸ್ ಬಳಿ ನಾರಾಯಣಪುರ ಬಲದಂಡೆ ಮುಖ್ಯ ನಾಲೆಗೆ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ತಾಲ್ಲೂಕಿನ ಬೆಂಡೋಣಿ ಗ್ರಾಮದ ಲಕ್ಕಪ್ಪ ವಿರುಪಾಕ್ಷಪ್ಪ ಕಮರಿ (25), ಬಸವಂತ ಶರಣಪ್ಪ ಉಪ್ಪಾರ (27) ಎಂದು ಗುರುತಿಸಲಾಗಿದೆ.

ಯುವಕರು ಕಾಲುವೆಯಲ್ಲಿ ಮುಳಗುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಕಾಲುವೆಯಿಂದ ಹೊರಗಡೆ ತರುವಷ್ಟರಲ್ಲಿ ಯುವಕರು ಕೊನೆಯುಸಿರು ಎಳೆದಿದ್ದಾರೆ.

ಘಟನಾ ಸ್ಥಳಕ್ಕೆ ತಲಪುವಷ್ಟರಲ್ಲಿ ಸ್ಥಳೀಯ ಈಜುಗಾರರು ಯುವಕರ ಮೃತದೇಹ ಹೊರಗಡೆ ತಂದಿದ್ದರು ಎಂದು ಅಗ್ನಿ ಶಾಮಕ ಠಾಣಾಧಿಕಾರಿ ಹೊನ್ನಪ್ಪ ದೊಡಮನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT