ಹಟ್ಟಿ ಚಿನ್ನದ ಗಣಿ: ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ನೆಪದಲ್ಲಿ ಅನಧಿಕೃತ ತರಬೇತಿ ಕೇಂದ್ರಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಕಾಯಂ ಶಿಕ್ಷಕರಾಗಿರುವ ಬಹುತೇಕರು ಈ ಕೇಂದ್ರಗಳನ್ನು ನಡೆಸುತ್ತಿದ್ದಾರೆ.

ಹಟ್ಟಿ, ಯಲಗಟ್ಟಾ, ಗುರುಗುಂಟಾ ಸೇರಿದಂತೆ ಇತರೆ ಗ್ರಾಮಗಳಲ್ಲಿ ಪರವಾನಗಿ ಪಡೆಯದೇ ಅನಧಿಕೃತವಾಗಿ ಈ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಇಲ್ಲಿ ನವೋದಯ, ಸೈನಿಕ, ರಾಜ್ಯ ಪಠ್ಯಕ್ರಮದ ಮೊರಾರ್ಜಿ ದೇಸಾಯಿ ಹಾಗೂ ಇತರೆ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸಲಾಗುತ್ತದೆ.

ಗೈರಾದರೂ ಹಾಜರಿ: ರಜೆ ಅವಧಿಯಲ್ಲಿ ಈ ಕೇಂದ್ರಗಳಲ್ಲಿ ಮಕ್ಕಳಿಗೆ ಕೋಚಿಂಗ್ ನೀಡಲಾಗುವುದು ಎಂದು ಹೇಳಲಾಗುತ್ತದೆ. ಆದರೆ, ಇದು ನಿಜವಲ್ಲ. ಈ ಕೇಂದ್ರಗಳು ಪೂರ್ಣಾವಧಿ ಕಾರ್ಯನಿರ್ವ ಹಿಸುತ್ತಿವೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳೇ ಈ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಾರೆ. ಮಕ್ಕಳು ಗೈರಾದರೂ ಶಾಲೆಗಳ ದಾಖಲಾತಿಯಲ್ಲಿ ಮಾತ್ರ ಅಲ್ಲಿನ ಶಿಕ್ಷಕರು ನಿತ್ಯವೂ ಹಾಜರಿ ಹಾಕುವುದು ಸಾಮಾನ್ಯವಾಗಿದೆ.

ಬಾಡಿಗೆ ಮನೆ, ಬಯಲು ಬಹಿರ್ದೆಸೆ: ಕೋಚಿಂಗ್ ಕೇಂದ್ರಗಳಲ್ಲಿನ ಸೌಕರ್ಯದ ಬಗ್ಗೆ ಆರೋಪಗಳು ಕೇಳಿಬಂದಿವೆ. ಪಟ್ಟಣದಲ್ಲಿ ಕೆಲವು ಕೇಂದ್ರಗಳು ಕೋಳಿ ಗೂಡಿನಂತಿವೆ. ಇನ್ನು ಕೆಲವು ಸಣ್ಣ ಬಾಡಿಗೆ ಮನೆಯಲ್ಲಿ ನಡೆಯುತ್ತಿವೆ. 50ರಿಂದ 80ಕ್ಕೂ ಅಧಿಕ ಮಕ್ಕಳನ್ನು ಕೊಟ್ಟಿಗೆಯಲ್ಲಿ ದನಗಳಂತೆ ಕೂಡಿ ಹಾಕಲಾಗುತ್ತದೆ ಎಂಬ ಆರೋಪ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.