ಭಾನುವಾರ, ಆಗಸ್ಟ್ 14, 2022
26 °C

ರಾಯಚೂರು: ಲಾರಿ ಬಾಡಿಗೆ ಹೆಚ್ಚಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದುಬಾರಿಯಾದ ಹಿನ್ನೆಲೆಯಲ್ಲಿ ಲಾರಿ ಬಾಡಿಗೆ ಹೆಚ್ಚಿಸಲು ಉದ್ದಿಮೆಗಳ ಮಾಲೀಕರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿ ರಾಯಚೂರು ಲಾರಿ ಮಾಲೀಕರ ಮತ್ತು ಏಜೆಂಟ್ಸ್ ಸಂಘದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತ ಕಚೇರಿಗೆ ಮನವಿ ಸಲ್ಲಿಸಿದರು.

ಕಳೆದ 2 ವರ್ಷಗಳಿಂದ ಲಾಕ್ ಡೌನ್ ಇದ್ದ  ಕಾರಣ ಲಾರಿ ಮಾಲೀಕರು ಮತ್ತು ಚಾಲಕರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಸ್ತುತ ಡಿಸೇಲ್ ಬೆಲೆ ಪ್ರತಿ ಲೀಟರ್ಗೆ ₹93.53 ಆಗಿದೆ. ಕೆಲವೇ ದಿನಗಳಲ್ಲಿ ₹100 ರ ಗಡಿ ತಲುಪಲಿದೆ. ಇಂದನ ಬೆಲೆ ಏರಿಕೆಯಿಂದ ವಾಹನ ವಿಮೆಯ ಕಂತು, ಡಿಸೇಲ್ ಬೆಲೆ, ಟೈರ್ ಗಳ ಬೆಲೆ ಹೆಚ್ಚಾಗಿದೆ. ವಾಹನ ನಿರ್ವಹಣೆ ಖರ್ಚು ಕೂಡ ಹೆಚ್ಚಿದೆ. ಆದರೆ ಬಾಡಿಗೆ ಹಣದಲ್ಲಿ ಮಾತ್ರ ಯಾವುದೇ ಹೆಚ್ಚಳವಿಲ್ಲ ಎಂದು ದೂರಿದರು.

ವೆಚ್ಚ ಹೆಚ್ಚಾಗುವ ಕಾರಣ ಲಾರಿ ಮಾಲೀಕರಿಗೆ ಮತ್ತು ಚಾಲಕರಿಗೆ ಆರ್ಥಿಕ ನಷ್ಟ ಅನುಭವಿಸಬೇಕಾಗಿದ್ದು ಸಾಲದ ಕಂತುಗಳನ್ನು ಕಟ್ಟಲಾಗದೆ ಫೈನಾನ್ಸ್ ಕಂಪನಿಯವರಿಗೆ ವಾಹನ ಬಿಟ್ಟುಕೊಡುವ ಪರಿಸ್ಥಿತಿ ಬಂದಿದೆ. 

ಕುಟುಂಬ ನಿರ್ವಹಣೆಯೂ ಸಮಸ್ಯೆಯಾಗಿದೆ. ಪ್ರತಿದಿನ ಡೀಸೆಲ್ ಬೆಲೆ ಹೆಚ್ಚಳ ಹಿನ್ನೆಲೆ ರಾಯಚೂರು ರೈಸ್‍ಮಿಲ್ಲರ್ ಕಾಂಟ್ರ್ಯಾಕ್ಟರ್, ಇಂಡಸ್ಟ್ರಿಗಳಿಗೆ, ಟ್ರೇಡರ್ಸ್‍ಗಳಿಗೆ, ರಾಯಚೂರು ಸಾಲ್ವೆಂಟ್‍ಗಳಿಗೆ ಈ ಬಗ್ಗೆ ತಿಳಿಸಿ ಲಾರಿಗಳ ಬಾಡಿಗೆಗಳನ್ನು ಹೆಚ್ಚಿಸಿಕೊಡಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಪದಾಧಿಕಾರಿ ತೌಫಿಕ್ ಹುಸೇನ್, ಮಹ್ಮದ್ ಕುತುಬುದ್ದಿನ್, ಸೈಯದ್ ಹಸನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು