ರಾಯಚೂರು: ವಿವಿಧ ಬೇಡಿಕೆಗಳು ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಜಿಲ್ಲಾ ಘಟಕದ ಸಿಐಟಿಯು ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಟಿಪ್ಪುಸುಲ್ತಾನ ಉದ್ಯಾವನದಲ್ಲಿ ಪ್ರತಿಭಟನೆ ನಡೆಸಿ ಆನಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ ಅವರು. ಎರಡು ವರ್ಷಗಳಿಂದ ಬಾಕಿ ಇರುವ ವೇತನ ಪಾವತಿಸಬೇಕು. ಗ್ರಾಮ ಪಂಚಾಯಿತಿ ಸಿಬ್ಬಂದಿ ಬಾಕಿ ಉಳಿದ ಅನುಮೋದನೆ ಸರ್ಕಾರ ಆದೇಶದಂತೆ ಎಲ್ಲರಿಗೂ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ನೀಡಬೇಕು. 14ನೇ ಹಣಕಾಸು ಯೋಜನೆ ಅಡಿಯಲ್ಲಿ ಶೇ 10 ರಷ್ಟು ಪ್ರತಿಶತ ವೇತನ ನೀಡಬೇಕು. ಜಿಲ್ಲೆಯಲ್ಲಿ ಖಾಲಿ ಇರುವ ಕರವಸೂಲಿಗಾರ ಹುದ್ದೆಗೆ ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪಂಪ್ ಆಪರೇಟರ್ ಸಿಬ್ಬಂದಿಗೆ ಸೇವಾ ಹಿರಿತನದ ಮೇಲೆ ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.

ಇಎಫ್ಎಂಸ್‌ನಿಂದ ಹೊರಗುಳಿದ ಸಿಬ್ಬಂದಿ ಮಾಹಿತಿ ಅಳವಡಿಸಲು ಪಿಡಿಓ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕು. ಜಿಲ್ಲೆಯಲ್ಲಿ ಅಕ್ರಮ ನೇಮಕಾತಿಗಳನ್ನು ತಡೆಹಿಡಿದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕರ ವಸೂಲಾತಿಯಲ್ಲಿ ಸಿಬ್ಬಂದಿಗೆ ಶೇ 40 ರಷ್ಟು ಪ್ರತಿಶತ ವೇತನವನ್ನು ನೀಡಲು ಪಿಡಿಓ ಅವರಿಗೆ ಆದೇಶ ನೀಡುವುದು. ಬಿಲ್ ಕಲೆಕ್ಟರ್ ಮತ್ತು ಡಾಟಾ ಎಂಟ್ರಿ ಆಪರೇಟರುಗಳಿಗೆ ’ಸಿ’ ದರ್ಜೆ ವೇತನ ಶ್ರೇಣಿ, ಪಂಪ್ ಆಪರೇಟರ್, ಜವಾನ, ಕಸಗುಡಿಸುವ ಅವರಿಗೆ ’ಡಿ’ ದರ್ಜೆಯ ವೇತನ ಶ್ರೇಣಿ ನಿಗಧಿಗೊಳಿಸಿ ಬಜೆಟ್‌ನಲ್ಲಿ ಘೋಷಣೆ ಮಾಡಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಸಂಬಳಕ್ಕಾಗಿ ₹890 ಕೋಟಿ ಹಣದ ಅವಶ್ಯಕತೆ ಇದ್ದು, ₹518 ಕೋಟಿ ಮಾತ್ರ ಹಿಂದಿನ ಸರ್ಕಾರ ಮಂಜೂರಾತಿ ಮಾಡಿದ್ದಾರೆ. ಇನ್ನೂಳಿದ ₹372 ಕೋಟಿ ಮಂಜೂರು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಗುಂಜಳ್ಳಿ ಗ್ರಾಮ ಪಂಚಾಯತಿಯ ಕರವಸೂಲಿಗಾರ ಪ್ರಕಾಶ್ ಅವರ ಮರಣ ಹೊಂದಿದ ಪ್ರಯುಕ್ತ ಇವರ ಧರ್ಮಪತ್ನಿ ಸಂಧ್ಯಾ ಇವರನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವಂತೆ ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ನಾರಾಯಣ, ತಾಲ್ಲೂಕು ಸಮಿತಿ ಅಧ್ಯಕ್ಷ ಹನುಮಂತ ಬನ್ನಿಗೋಳ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಶರಣಬಸವ, ಸುರೇಶ ದೇವಸುಗೂರು, ಹನುಮಂತ, ಎ.ಅಶೋಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.