ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಮನ ಸೆಳೆಯುತ್ತಿರುವ ವಿಶೇಷ ಮತಗಟ್ಟೆಗಳು

Published 3 ಮೇ 2024, 5:49 IST
Last Updated 3 ಮೇ 2024, 5:49 IST
ಅಕ್ಷರ ಗಾತ್ರ

ಮಸ್ಕಿ: ಮೇ 7 ರಂದು ನಡೆಯುವ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿ ಮತದಾರರ ಗಮನ ಸೆಳೆಯಲು ಚುನಾವಣೆ ಆಯೋಗ ಮುಂದಾಗಿದೆ.

ಮುಖ್ಯ ಚುನಾವಣಾಧಿಕಾರಿಗಳ ಆದೇಶದಂತೆ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ 231 ಮತಗಟ್ಟೆಗಳ ಪೈಕಿ 5 ಮಾದರಿಯಲ್ಲಿ 9 ವಿಶಿಷ್ಟ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

ಸಖಿ ಮತಗಟ್ಟೆ, ವಿಶೇಷ ಚೇತನರ ಮತಗಟ್ಟೆ, ಯುವ ಜನರ ಮತಗಟ್ಟೆ, ಧ್ಯೇಯ ಆಧಾರಿತ ಮತಗಟ್ಟೆ ಹಾಗೂ ಸಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಈ ಮತಗಟ್ಟೆಗಳಲ್ಲಿ ವಿವಿಧ ಬಗೆಯ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ. ಮಸ್ಕಿ ಅಶೋಕನ ಶಿಲಾಶಾಸನ. ರೈತರು, ಮಹಿಳೆಯರು ಹಿಗೇ ಹತ್ತು ಹಲವಾರು ಚಿತ್ರಗಳನ್ನು ಬರೆಯುವ ಮೂಲಕ ಮತಗಟ್ಟೆಗಳ ಅಂದವನ್ನು ಮತದಾರರ ಗಮನ ಸೆಳೆಯುವಂತೆ ಮಾಡಲಾಗಿದೆ.

ಕುಣಿಕಲ್ಲೂರು ಸರ್ಕಾರಿ ಪ್ರಾಥಮಿಕ ಶಾಲೆ, ಸರ್ಕಾರಿ ಬಾಲಕಿಯರ ಕಾಲೇಜು ಮಸ್ಕಿ, ಹಿರಿಯ ಪ್ರಾಥಮಿಕ ಶಾಲೆ ಹಸಮಕಲ್‌, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೀನಸಮುದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತುರುವಿಹಾಳದಲ್ಲಿ ಸಖಿ ಸ್ಥಾಪನೆ ಮಾಡಲಾಗಿದೆ.

ಗುಡಿಹಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಚೇತನರ ಮತಗಟ್ಟೆ, ಮಸ್ಕಿ ಪಟ್ಟಣದ ನಾಯಕವಾಡಿ ಹಿರಿಯ ಪ್ರಾಥಮಿಕ ಶಾಲೆ ಯುವ ಜನ ನಿರ್ವಹಣೆಯ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದರೆ, ಮಸ್ಕಿ ಪುರಸಭೆಯ ಆವರಣದಲ್ಲಿ ಸ್ಥಳೀಯ ಧ್ಯೇಯ ಆಧಾರಿತ ಬೂತ್‌ ರಚನೆ ಹಾಗೂ ಬಳಗಾನೂರಿನ ಆಂಜನೇಯ ದೇವಸ್ಥಾನದ ಹತ್ತಿರದ ರೈತರ ಗೋದಾಮಿನಲ್ಲಿ ಸಂಪ್ರದಾಯಿಕ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

ಕ್ಷೇತ್ರದ 231 ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದ್ದು ಮತದಾರರ ಮೆಚ್ಚುಗೆಗೆ ಪಾತ್ರವಾಗಿದೆ.

ಮಸ್ಕಿ ಕ್ಷೇತ್ರದ ಮಟ್ಟೂರು ಗ್ರಾಮ ಪಂಚಾಯಿತಿಯ ಕುಣಿಕಲ್ಲೂರಿನಲ್ಲಿ ಸ್ಥಾಪಿಸಿದ ಸಖಿ ಮತಗಟ್ಟೆ.
ಮಸ್ಕಿ ಕ್ಷೇತ್ರದ ಮಟ್ಟೂರು ಗ್ರಾಮ ಪಂಚಾಯಿತಿಯ ಕುಣಿಕಲ್ಲೂರಿನಲ್ಲಿ ಸ್ಥಾಪಿಸಿದ ಸಖಿ ಮತಗಟ್ಟೆ.

ಮಸ್ಕಿ ಕ್ಷೇತ್ರದಲ್ಲಿ 5 ವಿವಿಧ ವಿಷಯ ಆಧಾರಿತ 9 ಕಡೆ ವಿಶೇಷ ಬೂತ್‌ ಗಳನ್ನು ಸ್ಥಾಪಿಸಲಾಗುತ್ತಿದೆ. ಮತದಾನ ಜಾಗೃತಿಗೆ ತಾಲ್ಲೂಕು ಸ್ವೀಪ್‌ ಸಮಿತಿ ನಿರಂತರ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಬೂತ್‌ಗಳಲ್ಲಿ ವಿಶೇಷ ಟ್ಯಾಬ್ಲೊ ಮೂಲಕ ಜಾಗೃತಿ ಮೂಡಿಸಲಾಗಿದೆ. ಜಗದೀಶ ಗಂಗಣ್ಣನವರ್ ಸಹಾಯಕ ಚುನಾವಣಾಧಿಕಾರಿ ಮಸ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT