ಗುರುವಾರ , ಡಿಸೆಂಬರ್ 3, 2020
18 °C

ಈಶಾನ್ಯ ಪದವೀಧರರ ಕ್ಷೇತ್ರ: ಶೇ 10.01 ರಷ್ಟು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನವು ಜಿಲ್ಲೆಯಲ್ಲಿ ಬೆಳಿಗ್ಗೆ 8 ರಿಂದ ಆರಂಭವಾಗಿದ್ದು, ಬೆಳಿಗ್ಗೆ 10 ಗಂಟೆಗೆ ಶೇ 10.01 ರಷ್ಟು ಮತದಾನವಾಗಿದೆ.

ಜಿಲ್ಲೆಯ 17 ಮತಗಟ್ಟೆಗಳಲ್ಲಿ ಶಿಕ್ಷಕರು ಮತ ಚಲಾವಣೆ ಮಾಡಲು ಸರದಿ ನಿಂತಿದ್ದಾರೆ. ಒಟ್ಟು 3,528 ಮತದಾರರಿದ್ದಾರೆ.

ಆತಂಕ ಸೃಷ್ಟಿಸಿದ ಪಿಪಿಇ ಕಿಟ್ ಧಾರಿಗಳು!
ರಾಯಚೂರು:
ನಗರದ ಬಾಲಕಿಯರ ಪಿಯು ಕಾಲೇಜು ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಪಿಪಿಇ (ಪರ್ಸನಲ್ ಪ್ರೊಟೆಕ್ಷನ್ ಇಕ್ಯುಪಮೆಂಟ್) ಧರಿಸಿದ್ದನ್ನು ನೋಡಿ ಮತದಾರರು ಆತಂಕ ಪಡುತ್ತಿದ್ದಾರೆ.

ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನಕ್ಕಾಗಿ ಜಿಲ್ಲೆಯಲ್ಲಿ 17 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಗರದ ಪಿಯು ಕಾಲೇಜು ಮತಗಟ್ಟೆಯಲ್ಲಿ ಮಾತ್ರ ಪಿಪಿಇ ಕಿಟ್ ಧಾರಿಗಳಿದ್ದಾರೆ.

‘ತಾಪಮಾಣ ಏರಿಕೆ ಆಗಿದ್ದು, ಪಿಪಿಇ ಕಿಟ್ ಹಿಂಸೆ ನೀಡುತ್ತಿದೆ. ಮೇಲಧಿಕಾರಿಗಳ ಸಲಹೆಯಂತೆ ಕಿಟ್ ಧರಿಸಿದ್ದೇವೆ’ ಎಂದು ಮತಗಟ್ಟೆ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

‘ಈ ಮತಗಟ್ಟೆಯಲ್ಲಿ ಮಾತ್ರ ಕೊರೊನಾ ಸೋಂಕಿತರು ಇದ್ದಾರೆಯೇ ಎನ್ನುವ ಶಂಕೆ ಬರುತ್ತಿದ್ದು, ಮತದಾನ ಮಾಡುವುದಕ್ಕೆ ಆತಂಕವಾಗುತ್ತಿದೆ’ ಎಂದು ಮತದಾರರೊಬ್ಬರು ಆತಂಕ ವ್ಯಕ್ತಪಡಿಸಿದರು.


ಮತಗಟ್ಟೆಯಲ್ಲಿ ಮತದಾರರಿಗೆ ಕೋವಿಡ್‌ ತಪಾಸಣೆ ನಡೆಸಲಾಯಿತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು