ಗುರುವಾರ , ಮಾರ್ಚ್ 4, 2021
24 °C

ಮಗು ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH File

ರಾಯಚೂರು: ಜಿಲ್ಲೆಯ ಮಾನ್ವಿ ತಾಲ್ಲೂಕಿನ ಅರೋಲಿ ಗ್ರಾಮದಲ್ಲಿ ಪತಿಯ ಮನೆಯಿಂದ ಮಗು ಜೊತೆ ಕಾಣೆಯಾಗಿದ್ದ ತಾಯಿ, ಅದೇ ಗ್ರಾಮದಲ್ಲಿನ ಬಾವಿಗೆ ಹಾರಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮೂರು ದಿನ ಕಳೆದು ಬೆಳಕಿಗೆ ಬಂದಿದೆ.

ಹನುಮಂತಿ ಹುಲಗಯ್ಯ (26) ಹಾಗೂ ಉದಯ (14 ತಿಂಗಳು) ಪ್ರಾಣ ಕಳೆದುಕೊಂಡಿದ್ದಾರೆ. ರಾಯಚೂರು ತಾಲ್ಲೂಕಿನ ಮಟಮಾರಿ ಗ್ರಾಮದ ಹನುಮಂತಿ ಮತ್ತು ಹುಲಗಯ್ಯ ಅವರದ್ದು ಏಳು ವರ್ಷಗಳ ಹಿಂದೆ ಮದುವೆಯಾಗಿತ್ತು. ಪತಿ ಮತ್ತು ಪತಿಯ ಸಂಬಂಧಿಗಳು ಈಚೆಗೆ ಕಿರುಕುಳ ನೀಡಿದ್ದು, ಆತ್ಮಹತ್ಯೆಗೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಶುಕ್ರವಾರ ಮಗು ಜೊತೆ ಹನುಮಂತಿ ಅವರು ಮನೆಯಿಂದ ಹೊರಹೋಗಿದ್ದರು. ಕಾಣೆಯಾದ ಬಗ್ಗೆ ಸೋಮವಾರ ಮಾನ್ವಿ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಿಸಲಾಗಿತ್ತು. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು