ರಾಯಚೂರು: ‘ಜಗತ್ತಿನಲ್ಲಿ ಪುರುಷ ಪ್ರಧಾನ ಸಮಾಜಕ್ಕೆ ಬಹುತೇಕವಾಗಿ ಹೆಚ್ಚು ಸ್ತ್ರೀ ಮೂಲದ ದೈವ ರೂಪದಲ್ಲಿಯೇ ಪ್ರತಿರೋಧಗಳು ವ್ಯಕ್ತವಾಗಿರುವುದನ್ನು ಕಾಣುತ್ತೇವೆ. ಹಲವಾರು ಕಡೆಗಳಲ್ಲಿ ಪ್ರಕೃತಿಯಿಂದ ಹಿಡಿದು ಎಲ್ಲ ಕಡೆ ಸೂಕ್ಷ್ಮವಾಗಿ ಕಂಡಾಗ ಜಗತ್ತಿನ ಏಕೈಕ ದೈವವೇ ಸ್ತ್ರೀ’ ಎಂದು ರಾಯಚೂರಿನ ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಶಿವಾನಂದ ಕೆಳಗಿನಮನೆ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಆಶ್ರಯದಲ್ಲಿ ಕಲಾ ಸಂಕುಲ ಸಂಸ್ಥೆಯ ವತಿಯಿಂದ ಇಲ್ಲಿಯ ಕನ್ನಡ ಭವನದಲ್ಲಿ ಭಾನುವಾರ ರೇಖಾ ಬಡಿಗೇರ ರಚಿತ ‘ಉಧೋ ಉಧೋ ರೇಣುಕಾ ಎಲ್ಲಮ್ಮನ ಚರಿತ್ರೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಗತ್ತಿನಲ್ಲಿ ಕೃಷಿ ಕಂಡುಹಿಡಿದಿದ್ದೆ ಸ್ತ್ರೀ. ಕೃಷಿ ಜೀವನವು ಸ್ತ್ರೀಯಿಂದಲೇ ಶುರುವಾಯಿತು. ಸಾಹಿತ್ಯ ಆಸಕ್ತರು ಸಾಹಿತ್ಯವನ್ನು ಮೈಗೂಡಿಸಿಕೊಂಡು ಹಲವಾರು ವಿಚಾರಗಳನ್ನ ನಿರ್ಗಳವಾಗಿ ಬರಿಯುವಂತಹ ಕಲೆ ಇದ್ದಾಗ ಮಾತ್ರ ಹೊರಗಡೆ ಬರಲು ಸಾಧ್ಯ ಅಂತಹ ನಿಟ್ಟಿನಲ್ಲಿ ಇಂದು ಉಧೋ ಉಧೋ ರೇಣುಕ ಎಲ್ಲಮ್ಮನ ಜೀವನ ಚರಿತ್ರೆ ರೇಖಾ ಬಡಿಗೇರ ಅವರಿಂದ ಹೊರಗಡೆ ಬಂದಿದೆ’ ಎಂದು ತಿಳಿಸಿದರು.

‘ರೇಖಾ ಅವರು ಸಾಕಷ್ಟು ಅಧ್ಯಯನ ಮಾಡಿ ಹಾಗೂ ಅನೇಕರ ಸಂದರ್ಶನ ಪಡೆದು ಮತ್ತು ಹಲವರ ಮಾರ್ಗದರ್ಶನದಿಂದ ಈ ಕೃತಿ ಹೊರಗಡೆ ತಂದಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ. ಈ ಕೃತಿಯಲ್ಲಿ ವೇದ ಉಪನಿಷತ್ತುಗಳನ್ನು ಸಹ ದಾಖಲು ಮಾಡಿದ್ದಾರೆ ಎನ್ನುವುದು ವಿಶೇಷ. ಇದರಲ್ಲಿ ಎಲ್ಲಮ್ಮನ ಸಂಸ್ಕೃತಿಯನ್ನು ,ವಿಭಿನ್ನವಾಗಿ ವಿಶಿಷ್ಟವಾಗಿ ದಾಖಲಿಸಿದ್ದಾರೆ‘ ಎಂದು ಬಣ್ಣಿಸಿದರು.

ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಯೋಜಕ ಶರಣಪ್ಪ ಚಲವಾದಿ ಅವರು ಕೃತಿಯ ಪರಿಚಯ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ವೀರಾ ಹನುಮಾನ, ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಚನ್ನಬಸವ ದದ್ದಲ್, ಪತ್ರಕರ್ತ ಬಿ.ಎನ್. ಹೊರಪೇಟೆ, ಲೇಖಕಿ ರೇಖಾ ಬಡಿಗೇರ, ಶಾಂತಾ ಬಲ್ಲಟಗಿ, ರಾವುತರಾವ್ ಬರೂರು, ದಂಡಪ್ಪ ಬಿರಾದಾರ್, ಬಿ. ವಿಜಯರಾಜೇಂದ್ರ, ಮಾರುತಿ ಬಡಿಗೇರ, ಅಮರೇಗೌಡ, ಸಯ್ಯದ್ ವಲಿ ಉಪಸ್ಥಿತರಿದ್ದರು.

ಬೆಳಕು ಸಂಸ್ಥೆ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಹಾಗೂ ವೆಂಕಟೇಶ್ ನವಲಿ ನಿರೂಪಿಸಿದರು.

ಉಧೋ ಉಧೋ ಕೃತಿಯನ್ನು ಬಹಳ ಸಂತೋಷದಿಂದ ಬಿಡುಗಡೆ ಮಾಡಿದ್ದೇನೆ ಇನ್ನಷ್ಟು ಕೃತಿಗಳನ್ನು ರೇಖಾ ಬಡಿಗೇರರವರು ಸಾಹಿತ್ಯ ಲೋಕಕ್ಕೆ ನೀಡಲಿ
ಶಿವಾನಂದ ಕೆಳಗಿನಮನೆ ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.