ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು | ಇರುಮುಡಿ ಸಮೇತ ಶಬರಿಮಲೆ ಯಾತ್ರೆ

Published 15 ಮೇ 2024, 15:53 IST
Last Updated 15 ಮೇ 2024, 15:53 IST
ಅಕ್ಷರ ಗಾತ್ರ

ಲಿಂಗಸುಗೂರು: ಶಬರಿಮಲೆಯ ತಿಂಗಳ ಪೂಜೆ (ಈದವಮ್) ನಿಮಿತ್ತ ಪಟ್ಟಣದ ಸ್ವಾಮಿ ಅಯ್ಯಪ್ಪ ದೇವಸ್ಥಾನದಿಂದ 25ಕ್ಕೂ ಹೆಚ್ಚು ಮಾಲಾಧಾರಿಗಳು ಇರುಮುಡಿ ಸಮೇತ ಶರಬರಿಮಲೆ ಯಾತ್ರೆ ಕೈಗೊಂಡರು.

ಅಯ್ಯಪ್ಪಸ್ವಾಮಿ ಮೂರ್ತಿಗೆ ಅಭಿಷೇಕ, ಮಹಾಮಂಗಳಾರತಿ ಮಾಡಲಾಯಿತು. ಹದಿನೆಂಟು ಮೆಟ್ಟಿಲು ಪೂಜೆ ನೆರವೇರಿಸಿ ಇರುಮುಡಿ ಪೂಜೆ ಸಲ್ಲಿಸಲಾಯಿತು.

ಮೇ ತಿಂಗಳ ಪೂಜಾ ದರ್ಶನ ಮೇ 14ರಿಂದ ಆರಂಭಗೊಂಡಿದ್ದು, ಮೇ 19ಕ್ಕೆ ಮುಕ್ತಾಯಗೊಳ್ಳಲಿದೆ. ಬಹುತೇಕ ಮಾಲಾಧಾರಿಗಳು ಕ್ರೂಸರ್ ಮತ್ತು ರೈಲಿನ ಮೂಲಕ ತೆರಳಿದರು.

ಗುರುಸ್ವಾಮಿಗಳಾದ ಈರಣ್ಣ, ಸಿದ್ದರಾಮಪ್ಪ, ಕಂಠಯ್ಯಸ್ವಾಮಿ, ಈರಪ್ಪ ಗುಂಡಸಾಗರ ನೇತೃತ್ವದಲ್ಲಿ ಬುಧವಾರ ಮಧ್ಯರಾತ್ರಿ ಪ್ರಯಾಣ ಬೆಳೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT