ಶನಿವಾರ, ಜನವರಿ 25, 2020
22 °C

Viral Video: ನೀರಿನ ಹೊಂಡಕ್ಕೆ ಬಿದ್ದ ಬಾಲಕಿಯ ರಕ್ಷಿಸಿದ ಯುವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನಗರದ ಎನ್ ಜಿಒ ಬಡಾವಣೆಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ತೊಡಿದ್ದ ಅಡಿಪಾಯದಲ್ಲಿ ನೀರು ತುಂಬಿದ ಗುಂಡಿಗೆ ಬಾಲಕಿಯೊಬ್ಬಳು ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿದ್ದನ್ನು ಗಮನಿಸಿ, ಯುವಕನೊಬ್ಬ ಈಜಿಕೊಂಡು ಬಾಲಕಿಯನ್ನು ರಕ್ಷಿಸಿದ್ದ ವಿಶೇಷ ವಿಡಿಯೋ ವೈರಲ್‌ ಆಗಿದೆ.

ಅಪಾರ್ಟ್ ಮೆಂಟ್ ನಿರ್ಮಾಣಕ್ಕಾಗಿ ತೊಡಿರುವ ಅಡಿಪಾಯದೊಳಗೆ ಮಳೆಗಾಲದಲ್ಲಿ ನೀರು‌ ಸಂಗ್ರಹವಾಗಿ ಬಾವಿಯಂತಾಗಿದೆ. 
ಎನ್ ಜಿಒ ಬಡಾವಣೆ ಸಮೀಪದ‌ ಹರಿಜನವಾಡದ ಆರು ವರ್ಷದ ಬಾಲಕಿಯು ಆಟ ಆಡುವಾಡುತ್ತಾ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿದ್ದಳು.

ಇನ್ನೊಂದು ಭಾಗದಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಯುವಕ ಇದನ್ನು ಗಮನಿಸಿದ್ದ, ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಿಸಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ‌ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆಯು ನಾಲ್ಕು ದಿನಗಳ ಹಿಂದೆ‌ ನಡೆದಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು