ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟಿಪಿಎಸ್‌: ಒಂದನೇ ಘಟಕದ ಉತ್ಪಾದನೆ ಆರಂಭ

Last Updated 26 ಆಗಸ್ಟ್ 2020, 16:17 IST
ಅಕ್ಷರ ಗಾತ್ರ

ಶಕ್ತಿನಗರ: ವಿದ್ಯುತ್ ಬೇಡಿಕೆ ಇಲ್ಲದ ಕಾರಣ, ಉತ್ಪಾದನೆ ಸ್ಥಗಿತಗೊಂಡಿದ್ದ ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ (ವೈಟಿಪಿಎಸ್‌) ಒಂದನೇ ವಿದ್ಯುತ್ ಘಟಕದ ಉತ್ಪಾದನೆ ಬುಧವಾರ ಆರಂಭಗೊಂಡಿದೆ.

800 ಮೆಗಾವಾಟ್ ಸಾಮರ್ಥ್ಯದ ಒಂದನೇ ಘಟಕದ ಉತ್ಪಾದನೆ ಜೂನ್ 3 ರಂದು ಸ್ಥಗಿತಗೊಳಿಸಲಾಗಿತ್ತು. ಇದೀಗ ಸೌರಶಕ್ತಿ, ಪವನ ವಿದ್ಯುತ್‌ ಮತ್ತು ಜಲ ವಿದ್ಯುತ್ ಮೂಲಗಳಿಂದ ಉತ್ಪಾದನೆ ಕಡಿಮೆ ಆಗಿದ್ದರಿಂದ 85 ದಿನ ನಂತರ ಶಾಖೋತ್ಪನ್ನ ವಿದ್ಯುತ್‌ಗೆ ಬೇಡಿಕೆ ಬಂದಿದೆ. ವಿದ್ಯುತ್ ಘಟಕದಲ್ಲಿ 741.62 ಮೆಗಾವಾಟ್ ಉತ್ಪಾದನೆ ಆಗುತ್ತಿದೆ.

ಕಲ್ಲಿದ್ದಲು ವಿಭಾಗದಲ್ಲಿ ಸದ್ಯಕ್ಕೆ 2 ಲಕ್ಷ ರಷ್ಟು ಕಲ್ಲಿದ್ದಲು ಸಂಗ್ರಹ ಇದೆ. ಒಟ್ಟು 1600 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಘಟಕಗಳಿಗೆ ಅಗತ್ಯ ಕಲ್ಲಿದ್ದಲು ಪೂರೈಕೆ ಕುರಿತು, ಗಣಿ ಕಂಪನಿಗಳ ಜೊತೆಗೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

ವಿದ್ಯುತ್ ಘಟಕಗಳ ನಿರ್ವಹಣೆಯನ್ನು ಆಂಧ್ರಪ್ರದೇಶದ ಪವರ್‌ ಮ್ಯಾಕ್‌ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ವೈಟಿಪಿಎಸ್‌ನಲ್ಲಿ ಒಟ್ಟು 654 ನೌಕರರು ಇದ್ದಾರೆ. ಅದರಲ್ಲಿ 494 ಜನರನ್ನು ಕರ್ನಾಟಕ ವಿದ್ಯುತ್ ನಿಗಮದ(ಕೆಪಿಸಿಎಲ್‌) ವ್ಯಾಪ್ತಿಯಲ್ಲಿ ಬರುವ ರಾಜ್ಯದ ವಿವಿಧ ಕಚೇರಿಗಳಿಗೆ ವರ್ಗಾವಣೆ ಮಾಡಲಾಗಿದೆ. ಸದ್ಯ ವೈಟಿಪಿಎಸ್‌ನಲ್ಲಿ 160 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT